ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೃತ ಯೋಧ ರಜೆ ಪಡೆದು ಮನೆಗೆ ತೆರಳಿದ್ದರು. ರಜೆ ಮುಕ್ತಾಯಗೊಳಿಸಿ ಜೂ.30 ರಂದು ಪಂಜಾಬ್ ಫಿರೋಜ್ಪುರದಲ್ಲಿದ್ದ ಯುನಿಟ್ ನಲ್ಲಿ ವಾಪಸ್ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಯೋಧನ ಮನೆಯ ಬಳಿಯೇ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.