ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಮಹಿಳೆಯರಿಗೆ ಸುರಕ್ಷತೆ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ ಮಹಿಳೆಯರ ಪಾಲಿಗೆ ಅಪಾಯಕಾರಿ ಎಂಬುದು ಸರ್ವೇಯಲ್ಲಿ ತಿಳಿದುಬಂದಿರುವುದು ಅವಮಾನಕಾರಿ ಸಂಗತಿ ಎಂದಿದ್ದಾರೆ.
ನವದೆಹಲಿ: ಮಹಿಳೆಯರಿಗೆ ಸುರಕ್ಷತೆ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ ಮಹಿಳೆಯರ ಪಾಲಿಗೆ ಅಪಾಯಕಾರಿ ಎಂಬುದು ಸರ್ವೇಯಲ್ಲಿ ತಿಳಿದುಬಂದಿರುವುದು ಅವಮಾನಕಾರಿ ಸಂಗತಿ ಎಂದಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ವಿಚಾರದಲ್ಲಿ ಭಾರತ ಅಪ್ಘಾನಿಸ್ತಾನ, ಸಿರಿಯಾ ಮತ್ತು ಸೌದಿ ಅರಬಿಯಾವನ್ನು ಮೀರಿಸುತ್ತಿದೆ. ಇದು ನಮ್ಮ ದೇಶಕ್ಕೆ ಎಂತಹ ಅಪಮಾನ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸಾಚಾರ, ಶೋಷಣೆ ಹೆಚ್ಚಾಗುತ್ತಿದ್ದು, ಭಾರತ ಮಹಿಳೆಯರಿಗೆ ಸುರಕ್ಷಿತವಲ್ಲಾ ಎಂಬ ಸಮೀಕ್ಷೆಯ ಬಗ್ಗೆ ರಾಹುಲ್ ಗಾಂಧಿ ವಿವರಿಸಿದ್ದಾರೆ.
ಜಾಗತಿಕ ತಜ್ಞರು ಬಿಡುಗಡೆಗೊಳಿಸಿದ ಸಮೀಕ್ಷೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ನೀಡುವ ಮೊದಲ 10 ರಾಷ್ಟ್ರಗಳು ಪಶ್ಚಿಮ ರಾಷ್ಟ್ರಗಳಾಗಿವೆ. 2011ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಪ್ಘಾನಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಪ್ ಕಾಂಗೊ, ಪಾಕಿಸ್ತಾನ, ಭಾರತ, ಮತ್ತು ಸೊಮಾಲಿಯಾ ರಾಷ್ಟ್ರಗಳು ಮಹಿಳೆಯರಿಗೆ ಹೆಚ್ಚಿನ ಅಪಾಯಕಾರಿ ರಾಷ್ಟ್ರಗಳು ಎಂದು ಹೇಳಲಾಗಿತ್ತು.
ಪ್ರಧಾನಿ ನರೇಂದ್ರಮೋದಿ ಈ ತಿಂಗಳು ಹಂಚಿಕೆ ಮಾಡಿದ್ದ ಫಿಟ್ನೇಶ್ ಚಾಲೆಂಜ್ ಹಾಗೂ ಯೋಗ ವಿಡಿಯೋದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ವ್ಯಾಯಾಮ ಮಾಡಲಿದ್ದು, ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶದಿಂದ ತಾನೂ ಪ್ರೇರಣೆಗೊಂಡು ವಿಹಾರ ಮಾಡುವುದಾಗಿ ಪ್ರಧಾನಿ ಹೇಳಿಕೆ ನೀಡಿದ್ದರು.
ದೇಶದ ಜನತೆ ಯೋಗಕ್ಕಾಗಿ ಕೆಲವು ಗಂಟೆ ವಿನಿಯೋಗಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು.
While our PM tiptoes around his garden making Yoga videos, India leads Afghanistan, Syria & Saudi Arabia in rape & violence against women. What a shame for our country! https://t.co/Ba8ZiwC0ad