ಸೌದಿ ಜೈಲಿನಲ್ಲಿರುವ ನನ್ನ ಪುತ್ರನನ್ನು ಬಿಡುಗಡೆಗೊಳಿಸಿ; ದುಃಖತಪ್ತ ತಾಯಿಯಿಂದ ಸುಷ್ಮಾಸ್ವರಾಜ್'ಗೆ ಮನವಿ

ನನ್ನ ಮಗನನ್ನು ಸೌದಿ ಅರೇಬಿಯಾದ ಜೈಲಿನಲ್ಲಿರಿಸಲಾಗಿದ್ದು, ಪುತ್ರನನ್ನು ರಕ್ಷಣೆ ಮಾಡುವಂತೆ ದುಃಖತಪ್ತ ತಾಯಿಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Updated on: 
ಹೈದರಾಬಾದ್; ನನ್ನ ಮಗನನ್ನು ಸೌದಿ ಅರೇಬಿಯಾದ ಜೈಲಿನಲ್ಲಿರಿಸಲಾಗಿದ್ದು, ಪುತ್ರನನ್ನು ರಕ್ಷಣೆ ಮಾಡುವಂತೆ ದುಃಖತಪ್ತ ತಾಯಿಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. 
ಹೈದರಾಬಾದ್ ನಿವಾಸಿಯಾಗಿರುವ ಮೊಹಮ್ಮದ್ ಫರೀದ್ (28) ಉದ್ಯೋಗಕ್ಕೆಂದು 2012ರಲ್ಲಿ ಸೌದಿ ಅರೇಬಿಯಾಗೆ ತೆರಳಿದ್ದು, ಮೊದಲು ಸೌದಿಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಕಿರುಕುಳ ಹೆಚ್ಚಾದ ಹಿನ್ನಲೆಯಲ್ಲಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೊಹಮ್ಮದ್ ತಾಯಿ ಸುಲ್ತಾನ ಅವರು ಹೇಳಿದ್ದಾರೆ. 
ಕಳ್ಳತನ ಆರೋಪದ ಮೇಲೆ ನನ್ನ ಪುತ್ರನನ್ನು 2014ರಲ್ಲಿ ಪೊಲೀಸರು ನನ್ನ ಮಗನನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ನನ್ನ ಮಗ ಜೈಲಿನಲ್ಲಿ ಮಗನನ್ನು ರಕ್ಷಣೆ ಮಾಡುವಂತೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿಕೊಂಡಿದ್ದಾರೆ. 
ನನ್ನ ಮಗ ಕಳೆದ 4 ವರ್ಷಗಳಿಂದ ಜೈಲಿನಲ್ಲಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಗನ ಕುರಿತು ಸಾಕಷ್ಟು ನೋವಾಗುತ್ತಿದೆ. ನನ್ನ ಮಗನನ್ನು ನಾನು ನೋಡಬೇಕು. ತೆಲಂಗಾಣ ಎನ್ಆರ್'ಐ ಇಲಾಖೆಯನ್ನು ಸಂಪರ್ಕಿಸಿದ್ದೆವು. ಪ್ರಕರಣ ಕುರಿತು ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಪತ್ರ ಬರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಾರತೀಯ ರಾಯಭಾರಿ ಕಚೇರಿಯಿಂದ ನನಗೆ ಕರೆಯೊಂದು ಬಂದಿತ್ತು. ಈ ವೇಳೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ್ದರು. ನನ್ನ ಮಗನಿಗೆ ಸಹಾಯ ಮಾಡಿ, ರಕ್ಷಣೆ ಮಾಡುವಂತೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com