ಡೀಸೆಲ್ ರೈಲ್ವೆ ಎಂಜಿನ್ ನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಮಾರ್ಪಾಡು: ಇತಿಹಾಸ ಸೃಷ್ಟಿಸಿದ ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ನೂತನ ಇತಿಹಾಸ ಸೃಷ್ಟಿಸಿದೆ. ಡೀಸೆಲ್ ಎಂಜಿನ್ ಒಂದನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸುವ ಮೂಲಕ ರೈಲ್ವೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಡೀಸೆಲ್   ರೈಲ್ವೆ  ಎಂಜಿನ್ ನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಮಾರ್ಪಾಡು , ಮೇಕ್ ಇನ್ ಇಂಡಿಯಾದಡಿಯಲ್ಲಿ ಭಾರತೀಯ ರೈಲ್ವೆಯಿಂದ ಇತಿಹಾಸ ಸೃಷ್ಟಿ
ಡೀಸೆಲ್ ರೈಲ್ವೆ ಎಂಜಿನ್ ನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಮಾರ್ಪಾಡು , ಮೇಕ್ ಇನ್ ಇಂಡಿಯಾದಡಿಯಲ್ಲಿ ಭಾರತೀಯ ರೈಲ್ವೆಯಿಂದ ಇತಿಹಾಸ ಸೃಷ್ಟಿ
Updated on: 
ನವದೆಹಲಿ: ಭಾರತೀಯ ರೈಲ್ವೆ ನೂತನ ಇತಿಹಾಸ ಸೃಷ್ಟಿಸಿದೆ. ಡೀಸೆಲ್  ಎಂಜಿನ್ ಒಂದನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸುವ ಮೂಲಕ ರೈಲ್ವೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ರೈಲ್ವೆ ಉತ್ಪಾದಕ ಘಟಕ  ದಿ ಡೀಸೆಲ್ ಲೋಕೋಮೋಟೀವ್ ವಕ್ರ್ಸ್(ಡಿಎಲ್‍ಡಬ್ಲ್ಯೂ) ನಲ್ಲಿ ರೈಲ್ವೆ ಈ ಸಾಧನೆ ಮಾಡಿದೆ.ಸ್ಥಳೀಯ ತಂತ್ರಜ್ಞಾನವನ್ನ ಉಪಯೋಗಿಸಿ ಡೀಸೆಲ್ ಎಂಜಿನ್ ಒಂದನ್ನು ವಿದ್ಯುತ್ ಚಾಲಿತ ಎಂಜಿನ್  ಆಗಿ ಪರಿವರ್ತನೆ ಗೊಳಿಸಲಾಗಿದೆ. ಈ ರೀತಿಯಲ್ಲಿ ಎಂಜಿನ್ ಬದಲಾವಣೆಯಾಗಿರುವುದು ಜಗತ್ತಿನಲ್ಲಿ ಇದೇ ಮೊದಲೆಂದು ರೈಲ್ವೆ ಘಟಕದ ಅಧಿಕಾರಿಗಳು ಹೇಳಿದ್ದಾರೆ. 
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ  2017ರ ಡಿಸೆಂಬರ್ 22 ಈ ಕಾರ್ಯ ಪ್ರಾರಂಬಗೊಂಡಿತ್ತು. 2018ರ ಫೆಬ್ರವರಿ 28ರಂದು ಎಂಜಿನ್ ಪರಿವರ್ತನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಂತಹಾ ಮಹತ್ವದ ಸಾಧನೆ ಮಾಡಲಾಗಿದೆ ಎಂದು ಡಿಎಲ್‍ಡಬ್ಲ್ಯೂ ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನಿತಿನ್ ಮೆಹ್ರೋತ್ರಾ ಹೇಳಿದರು.
ಹಳೆಯದಾಗಿದ್ದ ಎಂಜಿನ್ ಗಳನ್ನು ಪರಿವರ್ತನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಎಂಜಿನ್  ನ ಚಾಸಿಸ್, ಬೋಗಿಗಳು ಮತ್ತು ಟ್ರ್ಯಾಕ್ಷನ್ ಮೋಟಾರ್‍ಗಳನ್ನು ಹಾಗೆಯೇ ಉಳಿಸಿಕೊಂಡು ಎಂಜಿನ್ ಗೆ ಹೊಸ ಶಕ್ತಿ ತುಂಬುವ ಕೆಲಸ ಇದಾಗಿತ್ತು. ಸ್ಥಗಿತಗೊಳಿಸಲಾಗಿದ್ದ ಡಬ್ಲ್ಯೂಎಎಮ್4 ಕ್ಲಾಸ್ ಎಲೆಕ್ಟ್ರಿಕ್ ಎಂಜಿನ್ ನ ಸೈಡ್‍ವಾಲ್‍ಗಳು ಹಾಗೂ ಛಾವಣಿಯನ್ನ ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಎಸ್‍ಓ ಉಪಕರಣಗಳ ವಿನ್ಯಾಸವನ್ನು ಸೇನೆ ಮಾಡಿಕೊಟ್ಟಿತು. ಡಬ್ಲ್ಯೂಡಿಜಿ3ಎ ಚಾಸ್ಸಿಸ್‍ನ ಮಾರ್ಪಾಡಿಗಾಗಿ ಡಿಎಲ್‍ಡಬ್ಲ್ಯೂ ಚಿತ್ರಗಳನ್ನ ತಯಾರು ಮಾಡಿದೆ.ಎಂದು ರೈಲ್ವೆ ಉತ್ಪಾದನಾ ಘಟಕದ ಮೂಲಗಳು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com