ಇದೇ ವೇಳೆ ತಮಿಳುನಾಡಿಗೆ ನಾಯಕತ್ವದ ಬಗ್ಗೆ ಮಾತನಾಡಿರುವ ಅವರು ಈಗ ಜಯಲಲಿತಾ ಇಲ್ಲ. ಕರುಣಾನಿಧಿಗೆ ಅನಾರೋಗ್ಯ ಕಾಡುತ್ತಿದೆ, ಆದ್ದರಿಂದ ರಾಜ್ಯಕ್ಕೆ ನಾಯಕನ ಅಗತ್ಯವಿದ್ದು, ಆ ಕೊರತೆಯನ್ನು ತುಂಬುವುದಾಗಿ ರಜನಿಕಾಂತ್ ಹೇಳಿದ್ದು, ರಾಜಕೀಯವನ್ನು ಅರ್ಥಮಾಡಿಕೊಳ್ಳಿ ಆದರೆ ಶಿಕ್ಷಣದತ್ತ ಹೆಚ್ಚು ಗಮನ ಹರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ನಟ ಎಂಜಿಆರ್ ಬಗ್ಗೆಯೂ ಮಾತನಾಡಿರುವ ರಜನಿಕಾಂತ್, ತಮಿಳುನಾಡಿನ ರಾಜಕಾರಣದಲ್ಲಿ ಎಂಜಿಆರ್ ಗೆ ಸರಿಸಮನಾದ ನಾಯಕ ಬರುವುದಕ್ಕೆ ಆಗುವುದಿಲ್ಲ, "ಯಾರೂ ಸಹ ಮತ್ತೋರ್ವ ಎಂಜಿಆರ್ ಆಗಲಾರರು, ಮತ್ತೋರ್ವ ಎಂಜಿಆರ್ ಆಗುವುದರ ಬಗ್ಗೆ ಯೋಚನೆ ಮಾಡುವುದು ಮೂರ್ಖತನವಾಗುತ್ತದೆ ಎಂದು ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.