ಜಯಾ ಬಚ್ಚನ್ ಕುರಿತ ಹೇಳಿಕೆಗೆ ವಿಷಾದಿಸುತ್ತೇನೆ: ಬಿಜೆಪಿ ನಾಯಕ ನರೇಶ್ ಅಗರ್ವಾಲ್

ನೋವುಂಟು ಮಾಡುವ ಉದ್ದೇಶವಿರಲಿಲ್ಲ, ಜಯಾ ಬಚ್ಚನ್ ಕುರಿತ ಹೇಳಿಕೆಗೆ ವಿಷಾದಿಸುತ್ತೇನೆಂದು ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಅವರು ಮಂಗಳವಾರ ಹೇಳಿದ್ದಾರೆ...
ಬಿಜೆಪಿ ನಾಯಕ ನರೇಶ್ ಅಗರ್ವಾಲ್
ಬಿಜೆಪಿ ನಾಯಕ ನರೇಶ್ ಅಗರ್ವಾಲ್
Updated on: 
ನವದೆಹಲಿ: ನೋವುಂಟು ಮಾಡುವ ಉದ್ದೇಶವಿರಲಿಲ್ಲ, ಜಯಾ ಬಚ್ಚನ್ ಕುರಿತ ಹೇಳಿಕೆಗೆ ವಿಷಾದಿಸುತ್ತೇನೆಂದು ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಅವರು ಮಂಗಳವಾರ ಹೇಳಿದ್ದಾರೆ. 
ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ನನ್ನ ಹೇಳಿಕೆಯನ್ನು ಮಾಧ್ಯಮಗಳು ಬೇರೆಯದೇ ಆಯಾಮದಲ್ಲಿ ವರದಿ ಮಾಡಿವೆ. ಯಾರಿಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಹೇಳಿಕೆಗೆ ವಿಷಾದಿಸುತ್ತೇನೆ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆಂಂದು ಹೇಳಿದ್ದಾರೆ. 
ಸಮಾಜವಾದಿ ಪಕ್ಷವು ಅಗರ್ವಾಲ್ ಬದಲಿಗೆ ಜಯಾ ಬಚ್ಚನ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿತ್ತು. ಇದಕ್ಕೆ ಪ್ರತಿಕ್ರಯಿಸಿದ ನರೇಶ್ ಅಗರ್ವಾಲ್ ’ಚಲನಚಿತ್ರಗಳಲ್ಲಿ ನೃತ್ಯ ಮಾಡುವ, ನಟನೆ ಮಾಡುವವರನ್ನು ಬೆಂಬಲಿಸಿದ ಪಕ್ಷ ನನ್ನನ್ನು ಕಡೆಗಣಿಸಿತು’ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com