

ನವದೆಹಲಿ : ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲಾಗಿದ್ದ ಕೇಂದ್ರದ ಮಾಜಿ ಸಚಿವ ಕಾರ್ತಿ ಚಿದಂಬರಂ ಅವರನ್ನು ಏಪ್ರಿಲ್ 16ರವರೆಗೂ ಬಂಧಿಸಿದಂತೆ ರಕ್ಷಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಕಾರ್ತಿ ಚಿದಂಬರಂ ಷರತ್ತು ಬದ್ಧ ಜಾಮೀನು ಕುರಿತಂತೆ ಮೂರು ವಾರಗಳಲ್ಲಿ ಸಮಗ್ರ ಮಾಹಿತಿ ಒದಗಿಸುವಂತೆ ವಿಶೇಷ ನ್ಯಾಯಾಧೀಶ ಒ. ಪಿ. ಸೈನಿ. ತನಿಖಾ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಕಾರ್ತಿ ಚಿದಂಬರಂ ದೇಶದಿಂದ ಹೊರಗೆ ಹೋಗದಂತೆಯೂ ನ್ಯಾಯಾಲಯ ಸೂಚಿಸಿದೆ.
ಐಎನ್ ಎಸ್ ಮಾಧ್ಯಮ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್ ನಿನ್ನೆ ಜಾಮೀನು ಮಂಜೂರು ಮಾಡಿತ್ತು. ಕಾರ್ತಿ ಚಿದಂಬರಂ ವಿರುದ್ಧ ಆರೋಪಗಳು ನಿರಾಧಾರವಾದದ್ದು, ಆತ ವಿದೇಶಿ ಹೂಡಿಕೆ ಪ್ರವರ್ತಕ ಮಂಡಳಿಯಲ್ಲಿ ಹಣ ಹೂಡಿಕೆ ಬಗ್ಗೆ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ವಾದಿಸಿದ್ದರು.
ಆದರೆ, ಈ ವಾದ ಒಪ್ಪದ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ಸಹಕಾರ ನೀಡಿದ್ದಾರೆ ಎಂದು ವಾದಿಸಿದ್ದರು.
ವಾದ ವಿವಾದ ಆಲಿಸಿದ್ದ ದೆಹಲಿ ಹೈಕೋರ್ಟ್ ನಿನ್ನೆ ಬಂಧನದಿಂದ ರಕ್ಷಿಸುವಂತೆ ಕಾರ್ತಿ ಚಿದಂಬರಂ ಸಲ್ಲಿಸಿದ ಅರ್ಜಿ ಆಲಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಐಎನ್ ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ವಿರುದ್ಧ2017 ಮೇ 15 ರಂದು ಎಫ್ ಐ ಆರ್ ದಾಖಲಿಸಲಾಗಿತ್ತು. ಫೆಬ್ರವರಿ 28 ರಂದು ಲಂಡನ್ ನಿಂದ ಮರಳಿದ ಕಾರ್ತಿ ಚಿದಂಬರಂ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿತ್ತು.