ಬಿಹಾರ ಪತ್ರಕರ್ತರ ಹತ್ಯೆ: ಕೋರ್ಟ್‌ ಮುಂದೆ ಶರಣಾದ ಪ್ರಮುಖ ಆರೋಪಿ

ಬಿಹಾರದ ಪತ್ರಕರ್ತರಾದ ನವೀನ್ ನಿಶ್ಚಲ್ ಮತ್ತು ವಿಜಯ್ ಸಿಂಗ್ ಅವರ ಬೈಕ್ ಗೆ ರಾಜಕೀಯ ಮುಖಂಡನ ಎಸ್ ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ...
ಪ್ರತಿಭಟನಾಕಾರರು
ಪ್ರತಿಭಟನಾಕಾರರು
Updated on: 
ಅರಾ: ಬಿಹಾರದ ಪತ್ರಕರ್ತರಾದ ನವೀನ್ ನಿಶ್ಚಲ್ ಮತ್ತು ವಿಜಯ್ ಸಿಂಗ್ ಅವರ ಬೈಕ್ ಗೆ ರಾಜಕೀಯ ಮುಖಂಡನ ಎಸ್ ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪತ್ರಕರ್ತರು ಸಾವನ್ನಪ್ಪಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೋರ್ಟ್ ಮುಂದೆ ಶರಣಾಗಿದ್ದಾನೆ. 
ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ಹರ್ಶು ಮಿಯಾನ್ ಪುತ್ರ ಆರೋಪಿ ದಬ್ಲೋ ಮಿಯಾನ್ ಅರಾ ಸಿವಿಲ್ ಕೋರ್ಟ್ ಮುಂದೆ ಶರಣಾಗಿದ್ದಾನೆ. ಮಾಜಿ ಗ್ರಾಮದ ಮುಖ್ಯಸ್ಥೆ ಸಹೀದಾ ಪ್ರವೀಣ್ ಪತಿ ಹರ್ಶು ಮತ್ತು ಪುತ್ರ ದಬ್ಲೂ ಇಬ್ಬರು ಸೇರಿ ಎಸ್ಯುವಿ ಕಾರನ್ನು ಹಿಂದೂ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರಾದ ನವೀನ್ ನಿಶ್ಚಲ್ ಮತ್ತು ವಿಜಯ್ ಸಿಂಗ್ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದರು. 
ಇನ್ನು ಇದು ಅಪಘಾತವಲ್ಲ. ಸ್ಥಳೀಯ ಪ್ರಭಾವಿ ಮುಖಂಡ ತನ್ನ ಬೆಂಬಲಿಗರ ಮೂಲಕ ಮಾಡಿಸಿರುವ ಕೊಲೆಯಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು. 
ನವೀನ್ ನಿಶ್ಚಲ್ ಸಹೋದರ ರಾಜೇಶ್ ದೂರು ನೀಡಿದ್ದು ಈ ದೂರಿನಲ್ಲಿ ತನ್ನ ಸಹೋದರನ ಸಾವಿಗೆ ಸ್ಥಳೀಯ ಪಂಚಾಯತ್ ಮುಖ್ಯಸ್ಥ ಅಹ್ಮದ್ ಅಲಿ ಅಲಿಯಾಸ್ ಹರ್ಸು ಮತ್ತು ಆತನ ಪುತ್ರ ದಬ್ಲೂ ಅವರೇ ಕಾರಣ ಎಂದು ಆರೋಪಿಸಿದ್ದರು. ಅಪಘಾತ ಮಾಡಿದ ಎಸ್ ಯುವಿ ಇದೇ ಹರ್ಸುಗೆ ಸೇರಿದ್ದಾಗಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com