ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಗೆಹ್ಲೋಟ್ ಅವರನ್ನು ಎಐಎಸಿಸಿ ತರಬೇತಿ ಮತ್ತು ಸಂಘಟನೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಇದರ ಬೆನ್ನಲ್ಲೇ ಗೆಹ್ಲೋಟ್ ಅವರು ದಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯುವ ನಾಯಕರು ಕ್ಯೂನಲ್ಲಿ ಕಾಯುವುದನ್ನು ಕಲಿಬೇಕು. ಜಂಪ್ ಮಾಡಲು ಯತ್ನಿಸಬಾರದು ಎಂದು ಹೇಳಿರುವುದು ಆಂತರಿಕ ಕಲಹಕ್ಕೆ ಪುಷ್ಟಿ ನೀಡಿತ್ತು.