ಒಡಿಶಾ: ಬಿಇಎಂಸಿಯ 10 ಕಾಂಗ್ರೆಸ್ ಕಾರ್ಪೋರೇಟರಿಂದ ಪಕ್ಷಕ್ಕೆ ರಾಜಿನಾಮೆ

Published On :
ಬೆರ್ಹಾಂಪುರ್: ಒಡಿಶಾದ ಬೆರ್ಹಾಂಪುರ್ ಮಹಾನಗರ ಪಾಲಿಕೆ(ಬಿಇಎಂಸಿ)ಯ 10 ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಮಾಜಿ ಕೇಂದ್ರ ಸಚಿವ ಚಂದ್ರಶೇಖರ್ ಸಾಹು, ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬಿಕ್ರಮ್ ಕುಮಾರ್ ಪಾಂಡಾ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಗಬನ್ ಗಂಟಾಯತ್ ಸೇರಿದಂತೆ ಗಂಜಾಮ್ ನ ಹಲವು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದರು.
ಈಗ ಅವರನ್ನು ಬೆಂಬಲಿಸಿ 10 ಕಾಂಗ್ರೆಸ್ ಕಾರ್ಪೋರೇಟರ್ ಗಳು ರಾಜಿನಾಮೆ ನೀಡಿದ್ದು, 40 ಸದಸ್ಯ ಬಲದ ಬಿಇಎಂಸಿಯಲ್ಲಿ ಈಗ ಕಾಂಗ್ರೆಸ್ ಕೇವಲ ಒಬ್ಬ ಕಾರ್ಪೋರೇಟರ್ ಅನ್ನು ಮಾತ್ರಿ ಉಳಿಸಿಕೊಂಡಿದೆ.
10 ಕಾಂಗ್ರೆಸ್ ಕಾರ್ಪೋರೇಟರ್ ಗಳು ತಮ್ಮ ರಾಜಿನಾಮೆ ಪತ್ರವನ್ನು ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಸಾದ್ ಹರಿಚಂದನ್ ಅವರಿಗೆ ಕಳುಹಿಸಿದ್ದಾರೆ.
ನಮ್ಮ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ ಮತ್ತು 2013ರಲ್ಲಿ ನಮ್ಮ ಗೆಲುವಿಗೆ ಅವರೇ ಪ್ರಮುಖ ಕಾರಣವಾಗಿದ್ದರು. ಇನ್ನುಮುಂದೆ ಒಡಿಶಾದಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ ಎಂದು ಪಕ್ಷಕ್ಕೆ ರಾಜಿನಾಮೆ ನೀಡಿದ ಕಾರ್ಪೋರೇಟರ್ ಗಳಲ್ಲಿ ಒಬ್ಬರಾದ ಅನಿಲ್ ಕುಮಾರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


