ಡೇರಾ ಅನುಯಾಯಿ ರಂಜಿತ್ ಕೊಲೆಯಲ್ಲಿ ಗುರ್ವೀತ್ ಶಾಮೀಲು: ಮಾಜಿ ಚಾಲಕನಿಂದ ಸಾಕ್ಷ್ಯ

ಡೇರಾ ಸಚ್ಚಾ ಸೌಧಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಡೇರಾ ಅನುಯಾಯಿಯೊಬ್ಬರ ಕೊಲೆಯಲ್ಲಿ ಸಹ ಭಾಗಿಯಾಗಿದ್ದಾರೆ ಎಂದು ಗುರ್ಮೀತ್ ಸಿಂಗ್ ಮಾಜಿ ....
ಗುರ್ಮೀತ್ ರಾಮ್ ರಹೀಮ್ ಸಿಂಗ್
ಗುರ್ಮೀತ್ ರಾಮ್ ರಹೀಮ್ ಸಿಂಗ್
Updated on: 
ಚಂಡೀಗಢ: ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್  ಡೇರಾ ಅನುಯಾಯಿಯೊಬ್ಬರ ಕೊಲೆಯಲ್ಲಿ ಸಹ ಭಾಗಿಯಾಗಿದ್ದಾರೆ ಎಂದು ಗುರ್ಮೀತ್ ಸಿಂಗ್ ಮಾಜಿ ಚಾಲಕ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಸ್ವಯಂಘೋಷಿತ ದೇವ ಮಾನವ ಗುರ್ಮಿತ್ ಸಿಂಗ್ ಚಾಲಕನಾಗಿದ್ದ ಖಟ್ಟಾ ಸಿಂಗ್ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಡೇರಾ ಅನುಯಾಯಿ ರಂಜಿತ್ ಸಿಂಗ್ ಎನ್ನುವಾತನ ಕೊಲೆಯಲ್ಲಿ ಗುರ್ವೀತ್ ಬಾಬಾ ಅವರ ಕೈವಾಡವಿದೆ ಎಂದಿದ್ದಾನೆ.
ಸಿರ್ಸಾದಲ್ಲಿನ ಡೇರಾದ ಮುಖ್ಯ ಕಾರ್ಯಾಲಯದಲ್ಲಿರುವ ತನ್ನ ಸ್ಥಾನದಲ್ಲಿ ಜೂನ್ 16, 2002ರಂದು ನಡೆದ ಸಹವರ್ತಿಗಳ ಸಭೆಯಲ್ಲಿ ಗುರ್ವೀತ್ ಸಿಂಗ್, ರಂಜಿತ್ ನನ್ನು ಕೊಲ್ಲಲು ಆದೇಶಿಸಿದ್ದರು. ಆ ವೇಳೆ ತಾನು ಅಲ್ಲಿಯೇ ಇದ್ದದ್ದಾಗಿ ಚಾಲಕ ಖಟ್ಟಾ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. 
ರಂಜಿತ್ ಸೋದರಿಯನ್ನು ಬಾಬಾ ಗುರ್ವೀತ್ ಸಿಂಗ್ ಲೈಂಗಿಕವಾಗಿ ಬಳಸಿಕೊಂಡಿದ್ದ್ರೆಂದು ತಿಳಿದ ಬಳಿಕ ರಂಜಿತ್ ಸಿಂಗ್ ತನ್ನ ವಿರುದ್ಧ ನಡೆದಿದ್ದಾರೆಂದು ಬಾಬಾಗೆ ಸಂಶಯ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಅವರ ಕೊಲೆಯಾಗಿದೆ ಎಂದು ಚಾಲಕ ಹೇಳಿಕೆ ನೀಡಿದ್ದಾನೆ.
ಡೇರಾದಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯಗಳ ಕುರಿತಂತೆ ಅನಾಮಿಕ ಪತ್ರವೊಂದು ಹರಿದಾಡುತ್ತಿದ್ದು ಇದಕ್ಕೆ ರಂಜಿತ್ ಸಿಂಗ್ ಕಾರಣವೆಂದು ಭಾಬಾ ಗುರ್ವೀತ್ ಸಿಂಗ್ ನಂಬಿದ್ದರು ಎಂದು ಆತ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದಾನೆ.
ಡೇರಾ ಸಚ್ಚಾ ಸೌಧದ ಮಹಿಳಾ ಅನುಯಾಯಿಗಳಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಗುರ್ವೀತ್ ರಾಮ್ ರಹೀಮ್ ಸಿಂಗ್ ಗೆ ಕಳೆದ ವರ್ಷ 20ವರ್ಷಗಳ ಜೈಲುವಾಸ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಡೇರಾ ಅನುಯಾಯಿಯಾಗಿದ್ದ ರಂಜಿತ್ ಸಿಂಗ್  ಜುಲೈ 10, 2002ರಂದು ಹತ್ಯೆಗೀಡಾಗಿದ್ದರು.

ನ್ಯಾಯಾಲಯದಲ್ಲಿ ಚಾಲಕ ಖಟ್ಟಾ ಸಿಂಗ್ ಸಾಕ್ಷಿ ಹೇಳುವಾಗ ಬಾಬಾ ಗುರ್ವೀತ್ ಸಿಂಗ್ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದ ಮುಂದಿನ ವಿಚಾರಣೆ ಮೇ 15ಕ್ಕೆ ನಡೆಯಲಿದ್ದು ಅಂದು ಚಾಲಕನನ್ನು ಪ್ರತಿವಾದಿ ನ್ಯಾಯಾಧೀಶರು ಪಾಟೀ ಸವಾಲಿಗೆಳೆಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com