ಹಿಮಾಚಲ ಪ್ರದೇಶದಲ್ಲಿ ಉರುಳಿ ಬಿದ್ದ ಬಸ್:7 ಮಂದಿ ದುರ್ಮರಣ

ರಸ್ತೆಯಿಂದ ಬಸ್ ಉರುಳಿ ಬಿದ್ದ ಪರಿಣಾಮ ಸುಮಾರು 7 ಮಂದಿ ಸಾವನ್ನಪ್ಪಿ 12 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ...
ಉರುಳಿ ಬಿದ್ದ ಬಸ್
ಉರುಳಿ ಬಿದ್ದ ಬಸ್
Updated on: 
ಶಿಮ್ಲಾ: ರಸ್ತೆಯಿಂದ ಬಸ್ ಉರುಳಿ  ಬಿದ್ದ ಪರಿಣಾಮ ಸುಮಾರು 7 ಮಂದಿ ಸಾವನ್ನಪ್ಪಿ 12 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಸರ್ಮೌರ್ ನಲ್ಲಿ ನಡೆದಿದೆ.
ಮಾನ್ವಾಯಿಂದ ಸೋಲಾನ್ ಗೆ ತೆರಳುತ್ತಿದ್ದ ಖಾಸಗಿ ಬಸ್ ರಾಜಗರ್ ಪಟ್ಟಣದಿಂದ 25 ಕೀಮೀ ದೂರು ಇರುವ ನೈನೇತಿ ಪಂಚಾಯತ್ ರಸ್ತೆಯಲ್ಲಿ  ಉರುಳಿ ಬಿದ್ದಿದೆ. 
ಗಾಯಗೊಂಡವರನ್ನು  ಸೋಲಾನ್ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಬರುವ ಮುನ್ನವೇ ಸ್ಥಳೀಯರು ಬಂದು ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com