ಧಾರ್ಮಿಕ ತಾರತಮ್ಯಕ್ಕೆ ಭಾರತದಲ್ಲಿ ಜಾಗವಿಲ್ಲ: ಆರ್ಚ್ ಬಿಷಪ್ ಪತ್ರಕ್ಕೆ ರಾಜನಾಥ್ ಸಿಂಗ್ ಪ್ರತಿಕ್ರಿಯೆ

2019 ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮೋದಿಯನ್ನು ಟಾರ್ಗೆಟ್ ಮಾಡಿ ದೆಹಲಿಯ ಆರ್ಚ್ ಬಿಷಪ್ ಬರೆದಿರುವ ಪತ್ರದ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on: 
ನವದೆಹಲಿ: 2019 ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮೋದಿಯನ್ನು ಟಾರ್ಗೆಟ್ ಮಾಡಿ ದೆಹಲಿಯ ಆರ್ಚ್ ಬಿಷಪ್ ಬರೆದಿರುವ ಪತ್ರದ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. 
"ಆರ್ಚ್ ಬಿಷಪ್ ಬರೆದಿರುವ ಪತ್ರವನ್ನು ನಾನು ನೋಡಿಲ್ಲ, ಆದರೆ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಭಾರತದಲ್ಲಿ ಧರ್ಮ ಹಾಗೂ ಜಾತಿಯ ಆಧಾರದಲ್ಲಿ ತಾರತಮ್ಯ ಮಾಡುವುದಕ್ಕ ಅವಕಾಶವಿಲ್ಲ" ಎಂದು ಹೇಳಿದ್ದಾರೆ.  ದೇಶದಲ್ಲಿ ಪ್ರಕ್ಷುಬ್ಧ ರಾಜಕೀಯ ವಾತಾವರಣ ಉಂಟಾಗಿದ್ದು, ಪ್ರಜಾಪ್ರಭುತ್ವ, ಜಾತ್ಯಾತೀತ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ 2019 ರಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಲು ಪ್ರತಿ ಶುಕ್ರವಾರ ಉಪವಾಸವಿದ್ದು ಪ್ರಾರ್ಥನೆ ಸಲ್ಲಿಸುವಂತೆ ದೆಹಲಿಯ ಪ್ರೀಸ್ಟ್ ಗಳಿಗೆ ಆರ್ಚ್ ಬಿಷಪ್ ಪತ್ರ ಬರೆದಿದ್ದರು. 
ರಾಜಕೀಯ ಅಜೆಂಡಾ ಹೊಂದಿದ ಆರ್ಚ್ ಬಿಷಪ್ ಅವರ ಪತ್ರ ರಾಷ್ಟ್ರವ್ಯಾಪಿ ಚರ್ಚೆಗೆ ಗುರಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com