ಕರ್ನಾಟಕ ಫಲಿತಾಂಶ ಕೇವಲ ಟ್ರೈಲರ್ ಅಷ್ಟೇ, ಪೂರ್ಣ ಸಿನಿಮಾ 2019ರಲ್ಲಿ; ಆಂಧ್ರ ಐಟಿ ಸಚಿವ

ಕರ್ನಾಟಕ ವಿಧಾನಸಭಾ ಚುನಾವಣೆ ಕೇವಲ ಟ್ರೈಲರ್ ಅಷ್ಟೇ, ಸಂಪೂರ್ಣ ಸಿನಿಮಾ 2019ರ ಲೋಕಸಭಾ ಚುನಾವಣೆಯಲ್ಲಿದೆ ಎಂದು ಆಂಧ್ರಪ್ರದೇಶ ಐಟಿ ಸಚಿವ ನರಾ ಲೋಕೇಶ್ ಅವರು ಬುಧವಾರ ಹೇಳಿದ್ದಾರೆ...
ಐಟಿ ಸಚಿವ ನರಾ ಲೋಕೇಶ್
ಐಟಿ ಸಚಿವ ನರಾ ಲೋಕೇಶ್
Updated on
ವಿಶಾಖಪಟ್ಟಣ; ಕರ್ನಾಟಕ ವಿಧಾನಸಭಾ ಚುನಾವಣೆ ಕೇವಲ ಟ್ರೈಲರ್ ಅಷ್ಟೇ, ಸಂಪೂರ್ಣ ಸಿನಿಮಾ 2019ರ ಲೋಕಸಭಾ ಚುನಾವಣೆಯಲ್ಲಿದೆ ಎಂದು ಆಂಧ್ರಪ್ರದೇಶ ಐಟಿ ಸಚಿವ ನರಾ ಲೋಕೇಶ್ ಅವರು ಬುಧವಾರ ಹೇಳಿದ್ದಾರೆ. 
ಧರ್ಮ ಪೊರೊತಮ್ ಸಭಾ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿರುವ ಮಾಹಿತಿ ತಂತ್ರಜ್ಞಾನ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ನರಾ ಲೋಕೇಶ್ ಅವರು, ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ಜನತೆ ನಿಮಗೆ ಟ್ರೈಲರ್'ನ್ನಷ್ಟೇ ತೋರಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಸಿನಿಮಾವನ್ನು ತೋರಿಸಲಿದ್ದಾರೆಂದು ಹೇಳಿದ್ದಾರೆ. 
2014ರ ಚುನಾವಣೆಯಲ್ಲಿ ನಾವು ಬಿಜೆಪಿ ಜೊತೆಗೆ ಕೈಜೋಡಿಸಿದ್ದೆವು. ಬಿಜೆಪಿ ನಾಯಕರು ಗೆಲುವು ಸಾಧಿಸದೇ ಇದ್ದ ಪರಿಸ್ಥಿತಿಯಲ್ಲಿ ಟಿಡಿಪಿ ಕೈಜೋಡಿಸಿ ಗೆಲವು ಸಾಧಿಸುವ ಅವಕಾಶವನ್ನು ಮಾಡಿಕೊಟ್ಟಿದ್ದರು. ಬಿಜೆಪಿ ಶಾಸಕರು ಹಾಗೂ ಎಂಎಲ್'ಸಿಗಳು ಗೆಲವು ಸಾಧಿಸುವಂತೆ ಮಾಡಿದ್ದರು ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com