ಆರ್ ಪ್ರಜ್ವಲ್(40) ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಸವಿತ (38) ಹಾಗೂ 11 ವರ್ಷದ ಮಗುವನ್ನು ಹತ್ಯೆ ಮಾಡಿದ್ದಾನೆ. ಡಿಸೈನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಜ್ವಲ್ ತನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ನೌಕರಿಯನ್ನು ತ್ಯಜಿಸಿದ್ದರು. ನಂತರದ ದಿನಗಳಲ್ಲಿ ಆಸ್ತಿ ವಿವಾದ ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ ಪ್ರಜ್ವಲ್ ಮದ್ಯವ್ಯಸನಿಯಾಗಿದ್ದರು. ಇದರಿಂದಾಗಿ ಕುಟುಂಬದಲ್ಲಿ ಶಾಂತಿಯೂ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ, ಪುತ್ರಿಯನ್ನು ಹತ್ಯೆ ಮಾಡಿ ತಾನೂ ಕತ್ತು ಸೀಳಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ.