ಉತ್ತರ ಪ್ರದೇಶ: ರೈಲಲ್ಲಿ ಸಿಗರೇಟ್ ಸೇವನೆ ಬೇಡ ಎಂದದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ ಕೊಂದ!
ರೈಲಿನಲ್ಲಿ ಸಿಗರೇಟ್ ಸೇದುವುದು ಬೇಡ, ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ ಕೊಂದು ಹಾಕಿರುವ ಬರ್ಬರ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.
ಶಹಜಹಾನ್ಪುರ್(ಉತ್ತರ ಪ್ರದೇಶ): ರೈಲಿನಲ್ಲಿ ಸಿಗರೇಟ್ ಸೇದುವುದು ಬೇಡ, ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ ಕೊಂದು ಹಾಕಿರುವ ಬರ್ಬರ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಸಂಭವಿಸಿದ ಈ ಘಟನೆಯಲ್ಲಿ ಚೀನತ್ ದೇವಿ (45) ಎಂಬಾಕೆ ಸಾವನ್ನಪ್ಪಿದ್ದಾರೆ.ಸೋನು ಯಾದವ್ ಎಂಬಾತ ಆಕೆಯ ಕತ್ತು ಹಿಸುಕಿ ಕೊಂದಿರುವ ಆರೋಪಿ ಎನ್ನುವುದು ತಿಳಿದು ಬಂದಿದೆ.
ಘಟನೆ ವಿವರ
ಛತ್ ಪೂಜೆಗೆಂದು ತನ್ನ ಕುಟುಂಬಸ್ಥರೊಡನೆ ಬಿಹಾರ್ ಗೆ ಪಂಜಾಬ್-ಬಿಹಾರ್ ಜಲಿಯಾನ್ವಾಲ ಎಕ್ಸಪ್ರೆಸ್ ನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಚೀನತ್ ಅದೇ ಬೋಗಿಯಲ್ಲಿದ್ದ ಸೋನು ಯಾದವ್ ಧೂಮಪಾನ ಮಾಡಿದ್ದನ್ನು ಕಂಡು ಪ್ರಶ್ನಿಸಿದ್ದಾರೆ.
ಇಷ್ಟಕ್ಕೆ ಇಬ್ಬರ ನಡುವೆ ಜಗಳವಾಗಿದ್ದು ಬ್ವಾಗ್ವಾದ ನಡೆದಿದೆ. ಆ ವೇಳೆ ಯಾದವ್ ಚೀನತ್ ಅವರ ಕತ್ತು ಹಿಸುಕಿದ್ದಾರೆ. ಇದಾಗಿ ರೈಲು ಶಹರಾನ್ ಪುರ್ ನಲ್ಲಿ ನಿಂತಾಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.
ಘಟನೆ ಸಂಬಂಧ ಆರೋಪಿ ಸೋನು ಯಾದವ್ ಬಂಧಿಸಲ್ಪಟ್ಟಿದ್ದಾನೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಆಗಿದೆ ಎಂದು ಜಿಆರ್‍ಪಿ ಪೊಲೀಸರು ಹೇಳಿದ್ದಾರೆ.