ಬಿಜೆಪಿ ಅಪಾಯಕಾರಿ ಎಂದ ನಟ ರಜನಿಕಾಂತ್ ಅವರ ಮುಂದಿನ ನಡೆ ಏನು?

ಪ್ರಧಾನಿ ನರೇಂದ್ರ ಮೋದಿ ಅವರ ಕೆಲ ಯೋಜನೆಗಳನ್ನು ಬೆಂಬಲಿಸುತ್ತಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇದೀಗ ಬಿಜೆಪಿ ಅಪಾಯಕಾರಿ ಎಂದು...
ನರೇಂದ್ರ ಮೋದಿ-ರಜನಿಕಾಂತ್
ನರೇಂದ್ರ ಮೋದಿ-ರಜನಿಕಾಂತ್
Updated on: 
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಕೆಲ ಯೋಜನೆಗಳನ್ನು ಬೆಂಬಲಿಸುತ್ತಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇದೀಗ ಬಿಜೆಪಿ ಅಪಾಯಕಾರಿ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 
ನೋಟು ನಿಷೇಧಕ್ಕೆ 2 ವರ್ಷ ಕುರಿತಂತೆ ಚೆನ್ನೈನಲ್ಲಿ ಮಾತನಾಡಿದ ರಜನಿಕಾಂತ್ ಅವರು ನೋಟು ನಿಷೇಧದ ವಿಚಾರದಲ್ಲಿ ಬಿಜೆಪಿ ಸರಿಯಾಗಿ ಕಾರ್ಯಕತಗೊಳಿಸುವಲ್ಲಿ ವಿಫಲವಾಗಿದೆ. ಈ ಕುರಿತು ಸಮಗ್ರ ಚರ್ಚೆ ನಡೆಸಬೇಕಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ವಿಪಕ್ಷಗಳೆಲ್ಲಾ ಬಿಜೆಪಿ ಅಪಾಯಕಾರಿ ಎನ್ನುತ್ತಿವೆ ಎಂದಾದರೆ ಅದು ಅಪಾಯಕಾರಿಯೇ ಆಗಿರಬೇಕು ಎಂದು ನಗುತ್ತಾ ಹೇಳಿದರು. ಎಲ್ಲೂ ಬಿಜೆಪಿಯನ್ನು ನೇರವಾಗಿ ಟೀಕಿಸದೆ, ನೋಟು ನಿಷೇಧ ಜಾರಿಯಲ್ಲಿ ಸ್ವಲ್ಪಮಟ್ಟಿನ ಗೊಂದಲಗಳಾಗಿವೆ ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿಯನ್ನು ಹಣಿಯುವ ಸಲುವಾಗಿ ಬಿಜೆಪಿಯೇತ್ತರ ಪಕ್ಷಗಳು ಒಟ್ಟಾಗುತ್ತಿದ್ದು ಈ ಮಹಾಘಟ ಬಂಧನಕ್ಕೆ ರಜನಿಕಾಂತ್ ಅವರು ಭಾಗಿಯಾಗುವ ಕುರಿತು ಸ್ಪಷ್ಟನೆ ನೀಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com