

ಚೆನ್ನೈ: 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳೆಲ್ಲಾ ಒಗ್ಗೂಡಿ ಹೋರಾಟ ನಡೆಸಲಿವೆ ಎಂಬ ಮಾತುಗಳ ನಡುವೆ ಸೂಪರ್ ಸ್ಟಾರ್ ಮೋದಿ ವಿರುದ್ಧ 10 ಜನ ಒಗ್ಗೂಡಿದ್ದರೂ ಅವರೇ ಸಮರ್ಥ ಎಂದು ಹೇಳಿಕೆ ನೀಡಿದ್ದಾರೆ.
ಪ್ರತಿಪಕ್ಷಗಳ ಮಹಾಮೈತ್ರಿ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರ ವಿರುದ್ಧ 10 ಜನರು ಒಂದುಗೂಡಿದಾಗ ಯಾರು ಬಲಿಷ್ಠ . ಒಬ್ಬ ವ್ಯಕ್ತಿಯ ವಿರುದ್ಧ 10 ಜನರು ಒಂದಾದರೆ ಯಾರೂ ಸಮರ್ಥರು ರಜನಿಕಾಂತ್ ಹೇಳಿದ್ದಾರೆ.
ವಿಪಕ್ಷಗಳೆಲ್ಲಾ ಬಿಜೆಪಿ ಅಪಾಯಕಾರಿ ಎನ್ನುತ್ತಿವೆ ಎಂದಾದರೆ ಅದು ಅಪಾಯಕಾರಿಯೇ ಆಗಿರಬೇಕು ಎಂದು ನಿನ್ನೆ ನೀಡಿದ ಹೇಳಿಕೆಗೆ ಇಂದು ಸ್ಪಷ್ಟನೆ ನೀಡಿದ ರಜನಿಕಾಂತ್, ಪ್ರತಿಪಕ್ಷಗಳು ಈ ರೀತಿಯ ಭಯದಲ್ಲಿಯೇ ಎನ್ನುವ ಭಾವದಲ್ಲಿ ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸುತ್ತೀರಾ ಎಂಬ ಪ್ರಶ್ನೆಗೆ ನಂತರ ನಿರ್ಧರಿಸುವುದಾಗಿ ಹೇಳಿದರು. ರಜನಿಕಾಂತ್ ಪಕ್ಷವನ್ನು ಇನ್ನೂ ಅಧಿಕೃತಗೊಳಿಸದಿದ್ದರೂ 2021ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ರಜನಿಕಾಂತ್ ಹೇಳಿದರು.