ನವದೆಹಲಿ: ಅಂತರಾಷ್ಟ್ರೀಯ ಅಹಿಂಸಾ ದಿನ್ವಾದ ಮಹಾತ್ಮ ಗಾಂಧಿ ಜನ್ಮ ದಿನದಂದೇ ದೆಹಲಿ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ "ಕ್ರೂರತೆ" ಮೆರೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
"ಅಂತರಾಷ್ಟ್ರೀಯ ಅಹಿಂಸಾ ದಿನದಂದು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಾಗಿ ಬಂದಿದ್ದ ರೈತರ ಮೇಲೆ "ಕ್ರೂರತೆ" ಮೆರೆಯುವುದರೊಡನೆ ಬಿಜೆಪಿ ಸರ್ಕಾರವು ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನ ಆಚರಣೆಗೆ ನಾಂದಿ ಹಾಡಿದೆ ಈಗ ರೈತರು ವಾಯುಮಾರ್ಗದ ಮೂಲಕವೂ ದೆಹಲಿ ಪ್ರವೇಶಿಸುವುದಿಲ್ಲ" ರಾಹುಲ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ, ಸಾಲಮನ್ನಾ ಸೇರಿ ಅನೇಕ ಬೇಡಿಕೆಗಲ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯತ್ತ ಧಾವಿಸಿದ್ದ ಕಿಸಾನ್ ಕ್ರಾಂತಿ ಪಾದಯಾತ್ರೆ ಮೇಲೆ ಪೋಲೀಸರು ಜಲಫಿರಂಗು ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದರು.