ಮೃತ ಮಹಿಳೆಯನ್ನು ರಶ್ಮಿ ಅಲಿಯಾಸ್ ರೇಷ್ಮಾ ಎಂದು ಗುರುತಿಸಲಾಗಿದ್ದು ರಶ್ಮಿ 2016ರಲ್ಲಿ ಡಾಕ್ಟರ್ ಗಂಡನನ್ನು ಬಿಟ್ಟು ಡೈವರ್ ಶಹನವಾಜ್ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ನಂತರ ಶಹನವಾಜ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಇದರಿಂದಾಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಮಾರಿದ್ದ. ಇದನ್ನು ರಶ್ಮಿ ಪ್ರಶ್ನಿಸಿದಾಗ ಆಕೆಯನ್ನು ತಂದೆ ಜೊತೆ ಸೇರಿಕೊಂಡು ಶಹನವಾಜ್ ಕೊಲೆ ಮಾಡಿದ್ದ.