ಡೊನಾಲ್ಡ್ ಟ್ರಂಪ್-ಬಿಪಿನ್ ರಾವತ್
ದೇಶ
ಅಮೆರಿಕದ 'ನಿರ್ಬಂಧ'ದಂತ ಗೊಡ್ಡು ಬೆದರಿಕೆಗೆ ಭಾರತ ಬಗ್ಗಲ್ಲ: ಬಿಪಿನ್ ರಾವತ್
ರಷ್ಯಾದ ಎಸ್-400 ಟ್ರಯಂಪ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತ ಐತಿಹಾಸಿಕ ಹೆಜ್ಜೆಯನ್ನಿಟ್ಟಿದ್ದು ಅಮೆರಿಕ ನಿರ್ಬಂಧನೆಗಳಿಗೆ ಭಾರತ ಎಂದು ಬಗ್ಗಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ...
ನವದೆಹಲಿ: ರಷ್ಯಾದ ಎಸ್-400 ಟ್ರಯಂಪ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತ ಐತಿಹಾಸಿಕ ಹೆಜ್ಜೆಯನ್ನಿಟ್ಟಿದ್ದು ಅಮೆರಿಕ ನಿರ್ಬಂಧನೆಗಳಿಗೆ ಭಾರತ ಎಂದು ಬಗ್ಗಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತ ತನ್ನದೇ ಆದ ಸ್ವತಂತ್ರ ನೀತಿ ಹೊಂದಿದ್ದು ಅಮೆರಿಕದ ನಿರ್ಬಂಧದ ಬೆದರಿಕೆಗಳಿಗೆ ಬಗ್ಗಲ್ಲ. ಮಾಸ್ಕೋದಿಂದ ಎಸ್-400 ಟ್ರಯಂಪ್ ಸೇರಿದಂತೆ ಕಮೋವ್ ಹೆಲಿಕಾಫ್ಟರ್ ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ಪಡೆಯಲು ಭಾರತ ಸಶಕ್ತವಾಗಿದೆ ಎಂದು ರಾವತ್ ಹೇಳಿದ್ದಾರೆ.
ಅಮೆರಿಕದ ಬೆದರಿಕೆ ನಡುವೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಎಸ್-400 ಟ್ರಯಾಂಪ್ ದೀರ್ಘ ಮತ್ತು ಮಧ್ಯಮ ಶ್ರೇಣಿಯ ವಾಯು ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದರು.
ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ವ್ಯವಹಾರ ನಡುವೆ ದೇಶ ಮೇಲೆ ನಿರ್ಬಂಧ ಹೇರುವುದಾಗಿ ಅಮೆರಿಕ ಬೆದರಿಕೆ ಹಾಕುತ್ತಲೆ ಬಂದಿದೆ. ಅಮೆರಿಕದ ನಿರ್ಬಂಧದ ಬೆದರಿಕೆ ನಡುವೆ ರಷ್ಯಾದ ಎಸ್-400 ಟ್ರಯಾಂಪ್ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ