'ದಿ ಕ್ವಿಂಟ್' ಸಂಸ್ಥಾಪಕ ರಾಘವ್ ಬಹ್ಲ್ ವಿರುದ್ದ ಐಟಿ ಇಲಾಖೆ ದಾಳಿ

ತೆರಿಗೆ ಪಾವತಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮ ದೊರೆ ರಾಘವ್ ಬಹ್ಲ್ ಅವರ ನಿವಾಸದ ...
ದ ಕ್ವಿಂಟ್ ಪೋರ್ಟಲ್ ಸಂಸ್ಥಾಪಕ ರಾಘವ್ ಬಹ್ಲ್
ದ ಕ್ವಿಂಟ್ ಪೋರ್ಟಲ್ ಸಂಸ್ಥಾಪಕ ರಾಘವ್ ಬಹ್ಲ್

ನವದೆಹಲಿ: ತೆರಿಗೆ ಪಾವತಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮ ದೊರೆ ರಾಘವ್ ಬಹ್ಲ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ನೊಯ್ಡಾದಲ್ಲಿರುವ ಬಹ್ಲ್ ಅವರ ನಿವಾಸದ ಮೇಲೆ ಇಂದು ಬೆಳಗ್ಗೆ ಹಠಾತ್ ದಾಳಿ ನಡೆಸಿ ತನಿಖೆಗೆ ಸಂಬಂಧಿಸಿದ ದಾಖಲೆ ಮತ್ತು ಸಾಕ್ಷಿಗಳನ್ನು ತಪಾಸಣೆ ಮಾಡಿದೆ,

ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿಸದೆ ವಂಚಿಸುವ ಉದ್ಯಮಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆಗಿಳಿದಿದ್ದು, ಈ ಕಾರ್ಯಾಚರಣೆ ಕೂಡ ಅದರ ಒಂದು ಭಾಗವಾಗಿದೆ.

ಬಹ್ಲ್ ಅವರು ಕ್ವಿಂಟ್ ನ್ಯೂಸ್ ಪೋರ್ಟಲ್  ಮತ್ತು ನೆಟ್ ವರ್ಕ್ 18 ಗ್ರೂಪ್ ನ ಸ್ಥಾಪಕರಾಗಿದ್ದು, ಭಾರತದ ಮಾಧ್ಯಮ ಲೋಕದ ಖ್ಯಾತ ಉದ್ಯಮಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com