ದೇಶ

ಚೆನ್ನೈ: ಶಂಕರ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಿ. ಶಂಕರನ್ ಆತ್ಮಹತ್ಯೆ!

ಚೆನ್ನೈ: ಶಂಕರ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಿ. ಶಂಕರನ್ ಆತ್ಮಹತ್ಯೆ!
ಚೆನ್ನೈ: ಶಂಕರ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಿ. ಶಂಕರನ್ ಆತ್ಮಹತ್ಯೆ!
Published On :
ಚೆನ್ನೈ: ಶಂಕರ್ ಐಎಎಸ್ ಅಕಾಡೆಮಿಯ ಸ್ಥಾಪನೆ ಮೂಲಕ ಕಳೆದ ಹದಿನೈಉ ವರ್ಷಗಳಲ್ಲಿ ನೂರಾರು ನಾಗರಿಕ ಸೇವಾ ಅಧಿಕಾರಿಗಳಿಗೆ ತರಬೇತಿ ನೀಡಿದ್ದ ಡಿ. ಶಂಕರನ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆನ್ನೈನ ಮೈಲಾಪುರ್  ಪ್ರದೇಶದಲ್ಲಿದ್ದ ತನ್ನ ನಿವಾಸದಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಲೀಸರು ಹೇಳಿದ್ದಾರೆ.
ತಕ್ಷಣ ಅವರನ್ನು ಸರ್ಕಾರಿ ರಾಯ್ಪೆಟ್ಟಾ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ವೈದ್ಯರು ಅವರು ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಕೌಟುಂಬಿಕ ವಿವಾದದಿಂದ ನೊಂದು ಶಂಕರನ್ ಆತ್ಮಹತ್ಯೆ ನಿರ್ಧಾರಕ್ಕೆ ಬಂದರೆಂದು ಪೋಲೀಸರು ಮಾಹಿತಿ ಒದಗಿಸಿದ್ದಾರೆ.
ಮೃತದೇಹವನ್ನು ಅಣ್ಣಾ ನಗರದಲ್ಲಿನ ಶಂಕರ್ ಐಎಎಸ್ ಅಕಾಡಮಿ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿ ಅವರ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಬಳಿಕ ಶಂಕರನ್ ಹುಟ್ಟೂರು ಉತ್ನಾಂಕರೈ ಗ್ರಾಮದಲ್ಲಿ ಅವರ ಅಂತಿಮ ಸಂಸ್ಕಾರಗಳು ನೆರವೇರಿದವು.
2004 ರಲ್ಲಿ ಚೆನ್ನೈನ ಅಣ್ಣಾ ನಗರದಲ್ಲಿ ಪ್ರಾರಂಭವಾದ ಶಂಕರ್ ಐಎಎಸ್ ಅಕಾಡೆಮಿ ಸಿವಿಲ್ ಸರ್ವೀಸ್ ಆಕಾಂಕ್ಷಿಗಳಿಗೆ ಉತ್ತಮ ತರಬೇತಿ ನೀಡುವಲ್ಲಿ ಹೆಸರಾಗಿತ್ತು. ಇದು ಐಎಎಸ್, ಐಪಿಎಸ್ ಮತ್ತು ಐಆರ್ಎಸ್ ಅಧಿಕಾರಿಗಳೂ ಸೇರಿದಂತೆ 900 ಕ್ಕೂ ಅಧಿಕ ನಾಗರಿಕ ಸೇವಾ ಅಧಿಕಾರಿಗಳನ್ನು ರೂಪಿಸಿದ ಕೀರ್ತಿ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.