ಗೋವಾ: ಇಬ್ಬರು ಕಾಂಗ್ರೆಸ್ ಶಾಸಕರು ರಾಜಿನಾಮೆ

ಗೋವಾದಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆಯಾಗಿದ್ದು, ಇಬ್ಬರು 'ಕೈ' ಶಾಸಕರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ...
ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್
ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್
ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆಯಾಗಿದ್ದು, ಇಬ್ಬರು 'ಕೈ' ಶಾಸಕರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 
ಕಾಂಗ್ರೆಸ್ ಶಾಸಕರಾದ ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಗೋವಾ ವಿಧಾನಸಭೆ ಸ್ಪೀಕರ್ ಪ್ರಮೋದ್ ಸಾವಂತ್ ಅವರು ತಿಳಿಸಿದ್ದಾರೆ.
ಇಬ್ಬರು ಕಾಂಗ್ರೆಸ್ ಶಾಸಕರ ರಾಜಿನಾಮೆಯನ್ನು ಅಂಗೀಕರಿಸಿರುವುದಾಗಿ ಸಾವಂತ್ ಅವರು ಪಿಟಿಐ ತಿಳಿಸಿದ್ದಾರೆ. ಇದರೊಂದಿಗೆ 40 ಶಾಸಕರ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 16ರಿಂದ 14ಕ್ಕೆ ಕುಸಿದಿದೆ.
ರಾಜಿನಾಮೆ ನೀಡಿರುವ ಇಬ್ಬರು ಕಾಂಗ್ರೆಸ್ ಶಾಸಕರು ನಿನ್ನೆ ರಾತ್ರಿಯೇ ದೆಹಲಿಗೆ ತೆರಳಿದ್ದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ, ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com