ಆಕೆ ಅಶ್ಲೀಲವಾಗಿ ಕೈ ಬೆರಳು ತೋರಿಸಿದ್ದಳು ಎಂದು ವಿಡಿಯೋದಲ್ಲಿ ಹೇಳಿಕೊಂಡಿರುವ ಆಶಿಶ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. 'ದೇಶದಾದ್ಯಂತ ಪೊಲೀಸರು ನನ್ನನ್ನು ಭಯೋತ್ಪಾದಕನಂತೆ ಬಿಂಬಿಸಿದ್ದಾರೆ, ಇದಕ್ಕೆ ಅವರು ಹೊರಡಿಸಿರುವ ನೋಟಿಸ್ ಸಾಕ್ಷಿಯಾಗಿದೆ. ಬೇಕಾದರೆ ನೀವೇ ಸಿಸಿ ಕ್ಯಾಮೆರಾದ ದೃಶ್ಯಾವಳಿವಳಿಗಳನ್ನು ಪರಿಶೀಲಿಸಿ, ಯಾರು ಮಹಿಳೆಯರ ಶೌಚಾಲಯಕ್ಕೆ ಹೋದರು, ಯಾರು ಯಾರನ್ನು ನಿಂದಿಸಿದರು ಎಂಬುದು ಗೊತ್ತಾಗುತ್ತದೆ'.