ಕೊನೆಗೆ ತಾನೇ ಮಗುವನ್ನು ಹತ್ಯೆ ಮಾಡಿದ್ದೇನೆ ಎಂದು ವಿಚಾರಣೆಯ ಹಂತದಲ್ಲಿ ತಾಯಿ ಒಪ್ಪಿಕೊಂಡಿದ್ದಾರೆ. ಮಗು ಹುಟ್ಟಿದಾಗಿನಿಂದ ಕುಟುಂಬದಲ್ಲಿ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದ ಸಮಸ್ಯೆಗಳಿಗೆ ಮಗುವೇ ಕಾರಣ ಎಂದು ಉಸಿರುಗಟ್ಟಿಸಿ ಮಗುವನ್ನು ಹತ್ಯೆ ಮಾಡಲಾಗಿದೆ, ನಂತರ ಬಕೆಟ್ ತುಂಬಿದ ನೀರಿನಲ್ಲಿ ಹಾಕಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.