ಇಸಿಸ್ ಜೊತೆ ನಂಟು: ಕೆಂಪುಕೋಟೆ ಬಳಿ ಇಬ್ಬರು ಉಗ್ರರ ಬಂಧನ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಮತ್ತೊಂದು ಉಗ್ರ ಸಂಘಟನೆ ಐಎಸ್'ಜೆಕೆ (ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಕಾಶ್ಮೀರ) ಸೇರಿದ ಇಬ್ಬರು ಉಗ್ರರನ್ನು...
ಕೆಂಪುಕೋಟೆ, ನವದೆಹಲಿ (ಸಂಗ್ರಹ ಚಿತ್ರ)
ಕೆಂಪುಕೋಟೆ, ನವದೆಹಲಿ (ಸಂಗ್ರಹ ಚಿತ್ರ)
Updated on: 
ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಮತ್ತೊಂದು ಉಗ್ರ ಸಂಘಟನೆ ಐಎಸ್'ಜೆಕೆ (ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಕಾಶ್ಮೀರ) ಸೇರಿದ ಇಬ್ಬರು ಉಗ್ರರನ್ನು ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ದೆಹಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 
ಬಂಧಿತ ಉಗ್ರರನ್ನು ಪರ್ವೇಜ್ ರಶೀದ್ ಹಾಗೂ ಜಮ್ಶೆಡ್ ಜಹೂರ್ ಎಂದು ಗುರ್ತಿಸಲಾಗಿದ್ದು, ಇಬ್ಬರೂ ಕಾಶ್ಮೀರದ ಶೋಪಿಯಾನ್'ಗೆ ಸೇರಿದರವರೆಂದು ಹೇಳಲಾಗುತ್ತಿದೆ. ಕಣಿವೆ ರಾಜ್ಯದಿಂದಲೇ ಇಬ್ಬರೂ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. 
ಇಬ್ಬರು ಉಗ್ರರ ಸಂಬಂಧಿಕರನ್ನು ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ನಡೆಸಲಾಗಿದ್ದ ಎನ್'ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು. 
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಘಳು, ಇಬ್ಬರು ಉಗ್ರರೂ ಕಾಶ್ಮೀರದವರೇ ಆಗಿದ್ದು, ಕೆಂಪುಕೋಟೆ ಬಳಿ ಗುರುವಾರ ತಡರಾತ್ರಿ ಬಂಧನಕ್ಕೊಳಪಡಿಸಲಾಯಿತು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com