ತೈಲ ಬೆಲೆ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ವಿಫಲವಾಗಿದೆ ಎಂದ ಶಿವಸೇನೆ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ ಠಾಕ್ರೆ, ''ನಾಯಿಯ ಒಂದು ತಳಿ ಇದೆ. ಅದಕ್ಕೆ ಯಾವ ದಾರಿಯಲ್ಲಿ ಹೋಗಬೇಕು ಎಂಬುದು ಗೊತ್ತಿಲ್ಲ. ಶಿವಸೇನೆಯ ಪರಿಸ್ಥಿತಿ ಸಹ ಹಾಗೆ ಇದೆ. ಹಣ ಬರುವುದು ನಿಂತ ತಕ್ಷಣ ಮೈತ್ರಿಯಿಂದ ಹೊರ ಬರುವ ಬಗ್ಗೆ ಮಾತನಾಡುತ್ತದೆ. ಕೆಲಸ ಮುಗಿದ ನಂತರ ಮತ್ತೆ ಸುಮ್ಮನಾಗುತ್ತೆ' ಎಂದು ಟೀಕಿಸಿದ್ದಾರೆ.