ಮಹಿಳೆಯನ್ನು ಮನಸೋ ಇಚ್ಛೆ ಥಳಿಸಿದ ಪೊಲೀಸ್ ಪುತ್ರನ ಬಂಧನ: ಥಳಿತದ ವಿಡಿಯೋ ವೈರಲ್

ಮಹಿಳೆಯನ್ನು ಮನಸೋ ಇಚ್ಛೆ ಥಳಿಸಿದ್ದ ದೆಹಲಿ ಪೊಲೀಸ್ ಅಧಿಕಾರಿಯ ಪುತ್ರನನ್ನು ಬಂಧಿಸಲಾಗಿದೆ.
ಮಹಿಳೆಯನ್ನು ಮನಸೋ ಇಚ್ಛೆ ಥಳಿಸಿದ ಪೊಲೀಸ್ ಪುತ್ರನ ಬಂಧನ: ಥಳಿತದ ವಿಡಿಯೋ ವೈರಲ್
ನವದೆಹಲಿ: ಮಹಿಳೆಯನ್ನು ಮನಸೋ ಇಚ್ಛೆ ಥಳಿಸಿದ್ದ ದೆಹಲಿ ಪೊಲೀಸ್ ಅಧಿಕಾರಿಯ ಪುತ್ರನನ್ನು ಬಂಧಿಸಲಾಗಿದೆ. 
ಹಲ್ಲೆಗೊಳಗಾದ ಮಹಿಳೆ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದು ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ದ್ವಾರಕಾದಲ್ಲಿರುವ ತನ್ನ ಸ್ನೇಹಿತನ ಕಚೇರಿಯಲ್ಲಿ ಆರೋಪಿ ಈ ದೃಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ರೋಹಿತ್ ತೋಮರ್ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತಮ್ ನಗರದಲ್ಲಿರುವ ಸ್ನೇಹಿತನ ಕಚೇರಿಗೆ ಬರಲು ಮಹಿಳೆಗೆ ಸೂಚಿಸಿದ್ದಾನೆ. ಈ ವೇಳೆ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ ನಡೆಸಿದ್ದಾನೆ ಎಂದು ದೆಹಲಿಯ ದ್ವಾರಕಾ ವಿಭಾಗದ ಉಪ ಆಯುಕ್ತ ಆಂಟೋ ಅಲ್ಫೋನ್ಸ್ ಹೇಳಿದ್ದಾರೆ.  
ಘಟನೆ ಸೆ.2 ರಂದು ನಡೆದಿದ್ದು ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್ ದೆಹಲಿ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಸೂಚಿಸಿದ್ದರು. ಆರೋಪಿ ರೋಹಿತ್ ತೋಮರ್ ಮತ್ತೋರ್ವ ಮಹಿಳೆಗೆ ಇದೇ ವಿಡಿಯೋ ತೋರಿಸಿ ನಿನಗೂ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂಬ ಬೆದರಿಕೆ ಹಾಕಿದ್ದಾನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com