ಭಾರತದ ಮೇಲೆ ದಾಳಿ ಮಾಡಲು ಪಾಕ್ ಪ್ರಾಯೋಜಿತ ಉಗ್ರರಿಂದ ಗಂಭೀರ ಸಂಚು: ಅಮೆರಿಕ ವರದಿ

ಭಾರತ ಮತ್ತು ಆಫ್ಘಾನಿಸ್ತಾನಗಳಲ್ಲಿ ಭೀಕರ ಭಯೋತ್ಪಾದಕ ಕೃತ್ಯವೆಸಗಲು ಪಾಕಿಸ್ತಾನ ಪ್ರಾಯೋಜಿತ ಉಗ್ರರು ಗಂಭೀರ ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ವರದಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಭಾರತ ಮತ್ತು ಆಫ್ಘಾನಿಸ್ತಾನಗಳಲ್ಲಿ ಭೀಕರ ಭಯೋತ್ಪಾದಕ ಕೃತ್ಯವೆಸಗಲು ಪಾಕಿಸ್ತಾನ ಪ್ರಾಯೋಜಿತ ಉಗ್ರರು ಗಂಭೀರ ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ವರದಿ ನೀಡಿದೆ.
ಆಪ್ಘಾನಿಸ್ತಾನದ ಅಲ್ ಖೈದ್, ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ, ಜೈಷ್ ಇ ಮೊಮಹದ್ ಉಗ್ರ ಸಂಘಟನೆಗಳು ಈ ಬಗ್ಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ದುರಂತವೆಂದರೆ ಈ ವಿಧ್ವಂಸಕ ಯೋಜನೆಗೆ ಪಾಕಿಸ್ತಾನ ವೇದಿಕೆಯಾಗುತ್ತಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸುತ್ತಿದೆ.
ತನ್ನ ನೆಲದ ಹೊರಗೆ ಭಯೋತ್ಪಾದಕ ಕೃತ್ಯವೆಸಗಲು ಪಾಕಿಸ್ತಾನ ನೆರೆವನು ನೀಡುತ್ತಿದ್ದು, ಇದಕ್ಕಾಗಿ ಪಾಕಿಸ್ತಾನದ ರಹಸ್ಯ ಪ್ರದೇಶಗಳಲ್ಲಿ ಉಗ್ರರಿಗೆ ಬಹಿರಂಗವಾಗಿಯೇ ತರಬೇತಿ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ಕ್ಕಿಂತ ಮುಂಚಿನಿಂದಲೂ ಪಾಕಿಸ್ತಾನ ಉಗ್ರರ ತಾಲೀಮಿಗೆ ವೇದಿಕೆಯಾಗಿದ್ದು, ಅಮೆರಿಕ ಎಚ್ಚರಿಕೆಯ ಹೊರತಾಗಿಯೂ ಉಗ್ರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನದ ಕುಗ್ರಾಮಗಳಲ್ಲಿ ಇಂದಿಗೂ ಉಗ್ರ ತರಬೇತಿ ಕೇಂದ್ರ ಎಗ್ಗಿಲ್ಲದೆ ಸಾಗಿದ್ದು, ಪಾಕಿಸ್ತಾನ ಮೂಲಭೂತವಾದಿಗಳು ಸ್ಥಳೀಯ ಯುವಕರ ತಲೆ ಕೆಡಿಸಿ ಅವರಿಗೆ ಉಗ್ರ ತರಬೇತಿ ನೀಡುತ್ತಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಅಂತೆಯೇ ಇದೇ ಕಾರಣಕ್ಕೆ ಟ್ರಂಪ್ ಆಡಳಿತ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಇದಕ್ಕೂ ಬಗ್ಗದಿದ್ದಾಗ ಅಮೆರಿಕ ನೀಡುತ್ತಿದ್ದ ಭದ್ರತಾ ಆರ್ಥಿಕ ನೆರವನ್ನನು ಸ್ಥಗಿತಗೊಳಿಸಲಾಗಿತ್ತು. ಇದಾಗ್ಯೂ ಪಾಕಿಸ್ತಾನದ ಕುಗ್ರಾಮಗಳಲ್ಲಿ ಉಗ್ರರ ತರಬೇತಿ ಕಾರ್ಯ ಅವ್ಯಾಹತವಾಗಿ ಸಾಗಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com