ನನ್ನ ಮನೆಯನ್ನು ನಕ್ಸಲರು 2004 ರಲ್ಲಿ ನಾಶ ಮಾಡಿದ್ದರು. ಅಷ್ಟೇ ಅಲ್ಲದೇ ನನ್ನನ್ನು ಹತ್ಯೆ ಮಾಡುವುದಕ್ಕೂ ಯತ್ನಿಸಿದ್ದರು. ನನ್ನನ್ನು, ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವುದಕ್ಕೆ ನಾನು ಗ್ರಾಮವನ್ನು ತೊರೆಯಬೇಕಾಯಿತು, ಈಗ ನಾನು ಜೀವಿಸುವುದಕ್ಕೆ ಜಾಗವೇ ಇಲ್ಲದಂತಾಗಿದೆ, ನಮ್ಮದೇ ಸ್ವಂತ ಕೃಷಿ ಭೂಮಿ ಇದ್ದರೂ ನಾವು ಬೇರೆಯವರ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.