ದೆಹಲಿ: ಕೇಜ್ರಿವಾಲ್ ಜೊತೆಗೆ ಯುವತಿಯರ ಮಾರಾಟ ದಂಧೆ ಆರೋಪಿ ಫೋಟೋ ವೈರಲ್‌ !

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಪೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಜ್ರಿವಾಲ್ ಯುವತಿಯರ ಮಾರಾಟ ದಂಧೆಯ ಆರೋಪಿ ಪ್ರಭಾ ಮುನ್ನಿ ಅವರೊಂದಿಗಿರುವ ಪೋಟೋ ವೈರಲ್‌ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.
ಕೇಜ್ರಿವಾಲ್, ಪ್ರಭಾ ಮುನ್ನಿ
ಕೇಜ್ರಿವಾಲ್, ಪ್ರಭಾ ಮುನ್ನಿ
Updated on: 

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಪೋಟೋವೊಂದು ಇದೀಗ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಜ್ರಿವಾಲ್  ಯುವತಿಯರ ಮಾರಾಟ ದಂಧೆಯ   ಆರೋಪಿ ಪ್ರಭಾ ಮುನ್ನಿ ಅವರೊಂದಿಗಿರುವ ಪೋಟೋ  ವೈರಲ್‌ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

ಐದು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ  ಪ್ರಭಾ ಮುನ್ನಿಯನ್ನು ದೆಹಲಿಯಲ್ಲಿ ಪಂಜಾಬ್ ಭಾಗದ ಪೊಲೀಸರು  ಬಂಧಿಸಿದ ಒಂದು ದಿನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ವೈರಲ್ ಆಗಿದೆ. ಫೋಟೋದಲ್ಲಿ ಕಂಡು ಬಂದಂತೆ ಕೇಜ್ರಿವಾಲ್‌ ಅವರು ಪ್ರಭಾಮುನ್ನಿಯೊಂದು  ನಗುತ್ತಾ ಕುಳಿತಿದ್ದಾರೆ.

ಎನ್‌ಜಿಓವೊಂದನ್ನು ನಡೆಸುತ್ತಿದ್ದ ಪ್ರಭಾಮುನ್ನಿ ಜಾರ್ಖಂಡ್‌ನಿಂದ ನೂರಾರು ಯುವತಿಯರನ್ನು ಮಾನವ ಕಳ್ಳಸಾಗಾಣಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಭಾರೀ ದಂಧೆಯಲ್ಲಿ ಹಲವು ಯುವತಿಯರಿಗೆ ಉದ್ಯೋಗದ ಆಮಿಷ ಒಡ್ಡಿ  ಬಳಿಕ ಮಾರಾಟ ಮಾಡಿದ್ದಳು. 2013 ರಿಂದ ತಲೆ ಮರೆಸಿಕೊಂಡಿದ್ದಳು.  

ಜಾರ್ಖಂಡ್ ನಲ್ಲಿ ಈಕೆ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಈಕೆಯ ಬಂಧನಕ್ಕೆ  ಜಾರ್ಖಂಡ್ ಪೊಲೀಸರು 25 ಸಾವಿರ ಬಹುಮಾನ ಘೋಷಿಸಿದ್ದರು. ಪ್ರಭಾ ಈವರೆಗೂ ಎಷ್ಟು ಯುವತಿಯರನ್ನು ಮಾನವ ಕಳ್ಳಸಾಗಣೆ ಮಾಡಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ಆಕೆ ಜಾರ್ಖಂಡ್ ಪೊಲೀಸರ ವಶದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com