ದೇಶ

ವೆಬ್ ಸೈಟ್ ಗಳಲ್ಲಿ ಆಧಾರ್, ಮೊಬೈಲ್ ಸಂಖ್ಯೆ ಅಪ್ ಲೋಡ್ ಮಾಡದಂತೆ ಇಲಾಖಾ ಮುಖ್ಯಸ್ಥರಿಗೆ ದೆಹಲಿ ಸರ್ಕಾರ ಸೂಚನೆ !

ವೆಬ್ ಸೈಟ್ ಗಳಲ್ಲಿ ಆಧಾರ್, ಮೊಬೈಲ್ ಸಂಖ್ಯೆ  ಅಪ್ ಲೋಡ್ ಮಾಡದಂತೆ ಇಲಾಖಾ ಮುಖ್ಯಸ್ಥರಿಗೆ ದೆಹಲಿ ಸರ್ಕಾರ ಸೂಚನೆ !
ಸಾಂದರ್ಭಿಕ ಚಿತ್ರ
Published On :

ನವ ದೆಹಲಿ:ಆಧಾರ್, ಮೊಬೈಲ್ ನಂಬರ್ ನಂತಹ  ಕೆಲ ಸೂಕ್ಷ್ಮ  ಮಾಹಿತಿಯನ್ನು ಆಧಾರ್ ನಲ್ಲಿ ಅಪ್ ಲೋಡ್ ಮಾಡದಂತೆ  ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ದೆಹಲಿ ಸರ್ಕಾರ ಸೂಚನೆ ನೀಡಿದೆ.

ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯದ ಸೂಚನೆ ಮೇರೆಗೆ ಈಗಾಗಲೇ ಅಪ್ ಲೋಡ್ ಮಾಡಿದ್ದರೆ ಕೂಡಲೇ  ಸೂಕ್ಷ್ಮ ಮಾಹಿತಿಯನ್ನು ತೆಗೆದುಹಾಕುವಂತೆ ದೆಹಲಿ ಸರ್ಕಾರದ ಐಟಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೆಪ್ಟೆಂಬರ್ 11 ರಂದು  ತಿಳಿಸಿದೆ.

ಆಧಾರ್, ಮೊಬೈಲ್ ಸಂಖ್ಯೆಯ ಮಾಹಿತಿಯನ್ನು  ಕೆಲ ಇಲಾಖೆಗಳ ಮುಖ್ಯಸ್ಥರು ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡಿದದ್ದು ಕಂಡುಬಂದ ನಂತರ ಈ  ರೀತಿಯ ಸೂಚನೆ ನೀಡಲಾಗಿದೆ.

ಐಟಿ ಇಲಾಖೆ ವಿಶೇಷ ಕಾರ್ಯದರ್ಶಿ ಅಜಯ್ ಚಾಗಟಿ ತಮ್ಮ ವೆಬ್ ಸೈಟ್ ನಲ್ಲಿ  ಯಾವುದೇ "ಸೂಕ್ಷ್ಮ" ಮಾಹಿತಿಯನ್ನು ಹೊಂದಿಲ್ಲ ಎಂದು ಇಲಾಖೆಗಳಿಂದ ದೃಢೀಕರಣ ಪತ್ರವನ್ನು ಕೋರಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಹಾಗೂ ಆಧಾರ್ ಕಾಯ್ದೆ 2016ರ ಎಲ್ಲ ನಿಬಂಧನೆಗಳನ್ನು ಅನುಸರಿಸುವಂತೆ ಎಲ್ಲಾ ಇಲಾಖೆಗಳು ಹಾಗೂ ಏಜೆನ್ಸಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್ 26 ರಂದು ಆಧಾರ್ ಗೆ ಸಾಂವಿಧಾನಿಕ ಸ್ಥಾನಮಾನದ ತೀರ್ಪನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್, ಬ್ಯಾಂಕ್ ಖಾತೆ,  ಮೊಬೈಲ್ ಸಂಪರ್ಕ ಅಥವಾ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ ಎಂದು ತೀರ್ಪು ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.