'ಚುನಾವಣಾ ಆಯೋಗದ ಮಾರ್ಗಸೂಚಿಯ ಅನುಸಾರ ವಿಡಿಯೊ ಮಾಡುವಂತೆ ಸೂಚನೆ ನೀಡಿದ್ದೆ. ತಪ್ಪು ಮಾಡಿರಬಹುದಾದ ವ್ಯಕ್ತಿಗೆ ಶಿಕ್ಷೆಯಾಗಿಲ್ಲ, ಆದರೆ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನ ಕರ್ತವ್ಯವನ್ನು ನಾನು ನಿರ್ವಹಿಸಿರುವುದಕ್ಕೆ ನಾನೇಕೆ ಶಿಕ್ಷೆಗೆ ಗುರಿಯಾಗಬೇಕು? ಅಮಾನತು ಕಾನೂನು ಬಾಹಿರವಾದುದು, ಇದನ್ನು ನಾನು ನ್ಯಾಯಮಂಡಳಿಯಲ್ಲಿ ಎದುರಿಸುತ್ತೇನೆ. ಚಿತ್ರೀಕರಣ ನಡೆಸಲು ಎಸ್ ಪಿಜಿ ವಿರೋಧ ವ್ಯಕ್ತಪಡಿಸಲಿಲ್ಲ. ನಾನು ಎಸ್ ಪಿಜಿ ಸಂಪರ್ಕಿಸಿಯೇ ಈ ಸೂಚನೆ ನೀಡಿದ್ದು, ನಾವು ಭದ್ರತೆ ನೀಡಿರುವ ವ್ಯಕ್ತಿಗಳಿಗೆ ಬೇರೆ ನಿಯಮಗಳು ಅನ್ವಯವಾಗುತ್ತವೆ ಎಂದು ಎಸ್ ಪಿ ಜಿ ಅಧಿಕಾರಿಗಳೇಕೆ ತಿಳಿಸಲಿಲ್ಲ?... ನಾನು 22 ವರ್ಷಗಳಿಂದ ಆಡಳಿತ ಸೇವೆಯಲ್ಲಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ಮೊಹಿಸಿನ್ ಹೇಳಿದ್ದಾರೆ.