ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ ಭಾರತ 

ರಾಜಸ್ಥಾನದ ಜೋಧ್ ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ  ಕಲ್ಪಿಸುತ್ತಿದ್ದ  ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಭಾರತ ಇಂದು ಸ್ಥಗಿತಗೊಳಿಸಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ ಭಾರತ 
Updated on: 

ನವದೆಹಲಿ: ರಾಜಸ್ಥಾನದ ಜೋಧ್ ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ  ಕಲ್ಪಿಸುತ್ತಿದ್ದ  ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಭಾರತ ಇಂದು ಸ್ಥಗಿತಗೊಳಿಸಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಇಂದು ಈ ರೈಲು ಸಂಚರಿಸಲಿಲ್ಲ ಎಂದು ವಾಯುವ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಭಯ್ ಶರ್ಮಾ ತಿಳಿಸಿದ್ದಾರೆ.  ಮುಂದಿನ ಆದೇಶದವರೆಗೂ ಈ ರೈಲಿನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಜೋಧ್ ಪುರದ ಭಗತ್ ಕಿ ಕೊತ್ತಿ ರೈಲ್ವೆ ನಿಲ್ದಾಣದಿಂದ ಮುನಾಬಾವೊ ವರೆಗೂ  ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚರಿಸುತಿತ್ತು.  ಪಾಕಿಸ್ತಾನಕ್ಕೆ ಹೋಗಲು ಈ ರೈಲಿನಲ್ಲಿ 45 ಜನರು ಟಿಕೆಟ್ ಬುಕ್ ಮಾಡಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಂಡು ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ  ಜೋಧ್ ಪುರಕ್ಕೆ ತೆರಳುತ್ತಿದ್ದ ರೈಲನ್ನು ಸ್ಥಗಿತಗೊಳಿಸುತ್ತಿರುವುದಾಗಿ ಪಾಕಿಸ್ತಾನ ರೈಲು ಸಚಿವ ಶೇಕ್ ರಷೀದ್ ಅಹ್ಮದ್ ಆಗಸ್ಟ್ 9 ರಂದು  ಘೋಷಿಸಿದ್ದರು. 

ಇದಕ್ಕೆ ಪ್ರತಿಯಾಗಿ ಇಂದಿನಿಂದ ರಾಜಸ್ಥಾನದ ಜೋಧ್ ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ  ಕಲ್ಪಿಸುತ್ತಿದ್ದ  ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಇಂದು ಸ್ಥಗಿತಗೊಳಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com