ಫಿಟ್ ಇಂಡಿಯಾ ಕನಸು ಶೀಘ್ರದಲ್ಲೇ ನನಸಾಗಲಿದೆ: ಶಿಲ್ಪಾ ಶೆಟ್ಟಿ

ಫಿಟ್ ಇಂಡಿಯಾದ ಕನಸು ಆದಷ್ಟು ಬೇಗ ಸಾಕಾರಗೊಳ್ಳಲಿದೆ ಎಂದು ಬಾಲಿವುಡ್ ನಟಿ, ಫಿಟ್ ನೆಸ್ ತಜ್ಞೆ ಶಿಲ್ಪಾ ಶೆಟ್ಟಿ ಆಶಿಸಿದ್ದಾರೆ.
ಶಿಲ್ಪಾ ಶೆಟ್ಟಿ ಫಿಟ್ ಇಂಡಿಯಾ ಸಮಿತಿ ಸಭೆ
ಶಿಲ್ಪಾ ಶೆಟ್ಟಿ ಫಿಟ್ ಇಂಡಿಯಾ ಸಮಿತಿ ಸಭೆ
Updated on: 

ನವದೆಹಲಿ: ಫಿಟ್ ಇಂಡಿಯಾದ ಕನಸು ಆದಷ್ಟು ಬೇಗ ಸಾಕಾರಗೊಳ್ಳಲಿದೆ ಎಂದು ಬಾಲಿವುಡ್ ನಟಿ, ಫಿಟ್ ನೆಸ್ ತಜ್ಞೆ ಶಿಲ್ಪಾ ಶೆಟ್ಟಿ ಆಶಿಸಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಗುರುವಾರ ಚಾಲನೆ ನೀಡಿದ ‘ಫಿಟ್ ಇಂಡಿಯಾ ಚಳವಳಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಲ್ಪಾ, ನಿತ್ಯದ ಚಟುವಟಿಕೆ, ಆಟೋಟಗಳಿಗೆ ಉತ್ತೇಜನ ನೀಡುವ ಅಭಿಯಾನ ಆರಂಭಿಸಿದ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಅಭಿನಂದಿಸಿದರು.

 ಸಚಿವ ರಿಜಿಜು ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಶಿಲ್ಪಾ, “ಫಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವುದು ನನ್ನ ಕರ್ತವ್ಯವಾಗಿತ್ತು  ಆದಷ್ಟು ಶೀಘ್ರದಲ್ಲಿಯೇ ಭಾರತದ ಫಿಟ್ ನೆಸ್ ಕನಸು ನನಸಾಗಲಿದೆ” ಎಂದಿದ್ದಾರೆ. ಇದಕ್ಕೂ ಮುನ್ನ ಕಿರಣ್ ರಿಜಿಜು, “ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಫಿಟ್ ಇಂಡಿಯಾ ಮೂವ್ ಮೆಂಟ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಶಿಲ್ಪಾ ಶೆಟ್ಟಿಯವರಿಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು.

 ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಮೂವ್ ಮೆಂಟ್ ಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, “ಕ್ರೀಡೆಯು ನೇರವಾಗಿ ಫಿಟ್ ನೆಸ್ ಗೆ ಸಂಬಂಧಿಸಿದೆ  ಇದು ಕೇವಲ ಒಂದು ಪದವಲ್ಲ  ಆರೋಗ್ಯಕರ ಹಾಗೂ ಆನಂದಮಯ ಜೀವನಕ್ಕೆ ಅಗತ್ಯವಾದುದು” ಎಂದರು.

 “ಆಧುನಿಕ ಜೀವನಶೈಲಿಯಿಂದ ಎದುರಾಗಬಹುದಾದ ತೊಂದರೆ ನಿವಾರಿಸಿಕೊಳ್ಳಲು ಫಿಟ್ ನೆಸ್ ಮೂವ್ ಮೆಂಟ್ ಸಹಕಾರಿಯಾಗಲಿದೆ ಜೀವನಶೈಲಿಯಲ್ಲಿ ಒಂದು ಸಣ್ಣ ಬದಲಾವಣೆಯಾಗಲಿದೆ  ಈ ಬದಲಾವಣೆಗೆ ‘ಫಿಟ್ ಇಂಡಿಯಾ ಮೂವ್ ಮೆಂಟ್’ ಹೆಸರು ಸ್ಫೂರ್ತಿಯಾಗಲಿದೆ” ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com