ಹಣಕಾಸಿನ  ಬಿಕ್ಕಟ್ಟು: ಅಪಾರ್ಟ್ ಮೆಂಟ್ ನ 8 ನೇ ಮಹಡಿಯಿಂದ ಜಿಗಿದು ದಂಪತಿ ಆತ್ಮಹತ್ಯೆ 

 ಹಣಕಾಸಿನ ಬಿಕ್ಕಟ್ಟಿನ ಕಾರಣದಿಂದ ದಂಪತಿಯೊಂದು ಅಪಾರ್ಟ್ ಮೆಂಟ್ ನ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾಪುರಂನಲ್ಲಿ ಇಂದು ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್
ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್
Updated on: 

ಗಾಜಿಯಾಬಾದ್ :  ಹಣಕಾಸಿನ ಬಿಕ್ಕಟ್ಟಿನ ಕಾರಣದಿಂದ ದಂಪತಿಯೊಂದು ಅಪಾರ್ಟ್ ಮೆಂಟ್ ನ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾಪುರಂನಲ್ಲಿ ಇಂದು ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಡಿಯಿಂದ ಜಿಗಿಯುವ ಮುನ್ನ  ತನ್ನಿಬ್ಬರು ಮಕ್ಕಳನ್ನು ಈ ದಂಪತಿ  ಹತ್ಯೆ ಮಾಡಿದ್ದಾರೆ. ಇವರೊಟ್ಟಿಗೆ ಜಿಗಿದ ಮಹಿಳೆಯೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ದಂಪತಿ ವಾಸಿಸುತ್ತಿದ್ದ ಫ್ಲಾಟ್ ಭಾಗಿಲು ತೆರೆದಾಗ ಇಬ್ಬರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿತು. ಆತ್ಮಹತ್ಯೆ ನೋಟ್ ಕೂಡಾ ಸಿಕ್ಕಿದೆ. ಹಣಕಾಸಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿ  ಸುಧೀರ್ ಕುಮಾರ್ ತಿಳಿಸಿದ್ದಾರೆ.

ಈ ದಂಪತಿಗೆ ಒಂದು ಗಂಡು ಹಾಗೂ ಹೆಣ್ಣು ಮಗುವಿತ್ತು. ಬೆಳಗ್ಗೆ 5 ರಿಂದ 5-15ರ ಸುಮಾರಿನಲ್ಲಿ ಈ ದುರ್ಘಟನೆ ನಡೆದಿದೆ. ಏನೂ ಶಬ್ದ ಬಂದಿತ್ತು. ಬಂದು ನೋಡುವಷ್ಟರಲ್ಲಿ ಮೂವರು ರಕ್ತದ ಮಡುವಿನಲ್ಲಿ ಬಿದಿದ್ದರು. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾಗಿ ಅಪಾರ್ಟ್ ಮೆಂಟ್ ನ ಭದ್ರತಾ ಸಿಬ್ಬಂದಿ ಅಜಾಜ್  ಕರೀಂ ಖಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com