ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರರಾಗಿ ವಿಜಯ್ ಕುಮಾರ್ ನೇಮಕ

ಗೃಹ ಸಚಿವಾಲಯದ ನೂತನ ಹಿರಿಯ ಭದ್ರತಾ ಸಲಹೆಗಾರರಾಗಿ ವೀರಪ್ಪನ್ ಎನ್ಕೌಂಟರ್ ಖ್ಯಾತಿಯ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಗೃಹ ಸಚಿವಾಲಯದ ನೂತನ ಹಿರಿಯ ಭದ್ರತಾ ಸಲಹೆಗಾರರಾಗಿ ವೀರಪ್ಪನ್ ಎನ್ಕೌಂಟರ್ ಖ್ಯಾತಿಯ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕದ ನಿದ್ರೆಗೆಡಿಸಿದ್ದ ಕುಖ್ಯಾತ ನರಹಂತಕ ವೀರಪ್ಪನ್‌ ನನ್ನು 2004ರಲ್ಲಿ ಹತ್ಯೆಗೈದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ವಿಜಯ ಕುಮಾರ್‌ ಅವರನ್ನು ಇದೀಗ ಗೃಹ ಸಚಿವಾಲಯದ ನೂತನ ಹಿರಿಯ ಭದ್ರತಾ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಈ ಕುರಿತಂತೆ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದೆ.

ಇನ್ನು ಈ ಹಿಂದೆ ವಿಜಯ್ ಕುಮಾರ್ ಅವರು 2018ರಿಂದ ಜಮ್ಮು-ಕಾಶ್ಮೀರ ರಾಜ್ಯಪಾಲರ ಸಲಹೆಗಾರರಾಗಿ ವಿಜಯಕುಮಾರ್‌ ಕಾರ್ಯನಿರ್ವಹಿಸುತ್ತಿದ್ದರು. 1975ನೇ ಬ್ಯಾಚಿನ ತಮಿಳುನಾಡು ಕೇಡರ್‌ ಅಧಿಕಾರಿಯಾಗಿರುವ ಅವರು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com