'ಸುಪ್ರೀಂ' ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ, ಪ್ರತಿಮೆಗಳಿಂದ ಆದಾಯ ಬರುತ್ತಿದೆ: ಮಾಯಾವತಿ

ಪ್ರತಿಮೆ, ಪುತ್ಥಳಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಬಿಎಸ್ ಪಿ ಮುಖ್ಯಸ್ಥ ಮಾಯಾವತಿ ಬಿಜೆಪಿ ಹಾಗೂ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಲಖನೌ: ಪ್ರತಿಮೆ, ಪುತ್ಥಳಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಬಿಎಸ್ ಪಿ ಮುಖ್ಯಸ್ಥ ಮಾಯಾವತಿ ಬಿಜೆಪಿ ಹಾಗೂ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾಗಿದ್ದ ಪ್ರತಿಮೆ, ಪುತ್ಥಳಿಗಳ ಸಂಪೂರ್ಣ ವೆಚ್ಚವನ್ನು ಮಾಯಾವತಿ ಅವರೇ ನೀಡಬೇಕು ಎಂದು ನಿನ್ನೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಬಿಜೆಪಿ ಘಟಕ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಅಲ್ಲದೆ ಮಾಧ್ಯಮಗಳಲ್ಲೂ ಮಾಯಾವತಿ ಸರ್ಕಾರ ಕೈಗೊಂಡ ನಿರ್ಣಯದಿಂದ ಸಾರ್ವಜನಿಕರ ಹಣ ಬಳಕೆಯಾಗಿದೆ ಎಂಬ ವರದಿಗಳು ಬಿತ್ತರವಾಗಿತ್ತು.
ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ಮೌನ ಮುರಿದಿರುವ ಮಾಯಾವತಿ ಅವರು, ತುಳಿತಕ್ಕೊಳಗಾದ, ಕಡೆಗಣಿಸಲ್ಪಟ್ಟಿದ್ದ ಮಹಾ ನಾಯಕರ ಪುತ್ಥಳಿ ಪ್ರತಿಮೆಗಳನ್ನು ನಿರ್ಮಾಣ ಮಾಡಿದ್ದೇನೆ. ಅವರ ನೆನಪು ಅಜಾರಾಮರವಾಗಿರಲಿದೆ. ಈ ಕಾರ್ಯದ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ಚೇತನಗಳು ಇಂದು 
ಉತ್ತರ ಪ್ರದೇಶದ ಪಾರ್ಕ್ ಗಳಲ್ಲಿ ಜೀವಂತವಾಗಿದ್ದಾರೆ. ಈ ಪಾರ್ಕ್ ಗಳಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ನಿಯಮತಿ ಆದಾಯ ಕೂಡ ಬರುತ್ತಿದೆ ಎಂದು ಹೇಳಿದ್ದಾರೆ.
ಅಂತೆಯೇ ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿರುವ ಮಾಯಾವತಿ, ಸುಪ್ರೀಂ ಕೋರ್ಟ್ ನ ಮೌಖಿಕ ಅಭಿಪ್ರಾಯವನ್ನು ತೀರ್ಪು ಎಂಬಂತೆ ಬಿಂಬಿಸಬೇಡಿ.. ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದ್ದು, ಖಂಡಿತಾ ನಾವು ಇದರಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದು ಮಾಯಾವತಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com