ಭಯೋತ್ಪಾದನೆ ವಿರುದ್ಧ ಹೋರಾಡಲು ಆಪ್ತಮಿತ್ರ ಭಾರತಕ್ಕೆ ಬೇಷರತ್ ಬೆಂಬಲ ಘೋಷಿಸಿದ ಇಸ್ರೇಲ್

ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಹಾಗೂ ಪ್ರಮುಖವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕೆ ಇಸ್ರೇಲ್ ಭಾರತಕ್ಕೆ ಬೇಷರತ್ ಬೆಂಬಲ ಘೋಷಿಸಿದೆ.
ಭಯೋತ್ಪಾದನೆ ವಿರುದ್ಧ ಹೋರಾಡಲು ಆಪ್ತಮಿತ್ರ ಭಾರತಕ್ಕೆ ಬೇಷರತ್ ಬೆಂಬಲ ಘೋಷಿಸಿದ ಇಸ್ರೇಲ್
ಭಯೋತ್ಪಾದನೆ ವಿರುದ್ಧ ಹೋರಾಡಲು ಆಪ್ತಮಿತ್ರ ಭಾರತಕ್ಕೆ ಬೇಷರತ್ ಬೆಂಬಲ ಘೋಷಿಸಿದ ಇಸ್ರೇಲ್
ನವದೆಹಲಿ: ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಹಾಗೂ ಪ್ರಮುಖವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕೆ ಇಸ್ರೇಲ್ ಭಾರತಕ್ಕೆ ಬೇಷರತ್ ಬೆಂಬಲ ಘೋಷಿಸಿದೆ. 
ಉಗ್ರವಾದದ ವಿರುದ್ಧ ಹೋರಾಡುವುದಕ್ಕೆ ಭಾರತಕ್ಕೆ ತಾನು ನೀಡುವ ನೆರವಿಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಇಸ್ರೇಲ್ ಹೇಳಿದೆ. 
ಇಸ್ರೇಲ್ ನ ಹೊಸ ರಾಯಭಾರಿ ಅಧಿಕಾರಿ ಡಾ. ರೋನ್ ಮಲ್ಕಾ, ಭಾರತಕ್ಕೆ ಉಗ್ರವಾದದ ವಿರುದ್ಧ ಹೋರಾಡಲು ಇಸ್ರೇಲ್ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ  ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದು, ಭಾರತಕ್ಕೆ ಭಯೋತ್ಪಾದನೆ ವಿರುದ್ಧ ಹೋರಾಡಲು ಯಾವುದೇ ಮಟ್ಟದ ಸಹಾಯ ಮಾಡಲು ಸಿದ್ಧ ಎಂದು ಹೇಳಿದ್ದಾರೆ. 
ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇಸ್ರೇಲ್ ರಾಯಭಾರಿ ಕಚೇರಿ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. 
ಇಡೀ ವಿಶ್ವ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು,  ಭಾರತ ತನ್ನನ್ನು ರಕ್ಷಿಸಿಕೊಳ್ಳುವ ವಿಷಯದಲ್ಲಿ ನಾವು ಸಂಪೂರ್ಣ, ಮಿತಿಯೇ ಇಲ್ಲದ ನೆರವನ್ನು ಇಸ್ರೇಲ್ ನೀಡಲಿದೆ ಎಂದು ಡಾ. ರೋನ್ ಮಲ್ಕಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com