ಬಹಾವಲ್ಪುರ್ದಲ್ಲಿರುವ ಜೆಇಎಂ ಪ್ರಧಾನ ಕಚೇರಿಯನ್ನು ಪಂಜಾಬ್ ಸರ್ಕಾರ ವಶಕ್ಕೆ ಪಡೆದಿದೆ ಎಂದು ಪಾಕಿಸ್ತಾನ ಮಾಹಿತಿ ಸಚಿವ ಫವದ್ ಚೌಧರಿ ಅವರು ಹೇಳಿದ್ದರು. ಆದರೆ ಈಗ ಅದೇ ಸಚಿವ ಉಲ್ಟಾ ಹೊಡೆದಿದ್ದು, ನಾವು ವಶಕ್ಕೆ ಪಡೆದಿದ್ದು ಮದರಸಾವನ್ನು ಆದರೆ ಭಾರತ ಅದನ್ನು ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯ ಕಚೇರಿ ಎಂದು ಪ್ರಚಾರ ಮಾಡುತ್ತಿದೆ ಎಂದು ಭಾರತದ ವಿರುದ್ಧವೇ ಆರೋಪ ಮಾಡಿದ್ದಾರೆ.