ಲಂಚ ನೀಡಲು ಹಣವಿಲ್ಲದೇ ತಹಶೀಲ್ದಾರ್ ಗೆ ಎಮ್ಮೆಯನ್ನು ನೀಡಿದ ರೈತ!

ಲಂಚ ನೀಡಲು ಹಣವಿಲ್ಲದೇ ರೈತನೊಬ್ಬ ಎಮ್ಮೆಯನ್ನೇ ನೀಡಿದ ಘಟನೆ ಮಧ್ಯಪ್ರದೇಶದ ಟಿಕಮ್‌ಗಡ ಜಿಲ್ಲೆಯಲ್ಲಿ ನಡೆದಿದೆ...
ತಹಶೀಲ್ದಾರ್ ಗೆ ಎಮ್ಮೆ ನೀಡಿದ ರೈತ
ತಹಶೀಲ್ದಾರ್ ಗೆ ಎಮ್ಮೆ ನೀಡಿದ ರೈತ
Updated on: 
ಭೂಪಾಲ್: ಲಂಚ ನೀಡಲು ಹಣವಿಲ್ಲದೇ ರೈತನೊಬ್ಬ ಎಮ್ಮೆಯನ್ನೇ ನೀಡಿದ ಘಟನೆ ಮಧ್ಯಪ್ರದೇಶದ ಟಿಕಮ್‌ಗಡ ಜಿಲ್ಲೆಯಲ್ಲಿ ನಡೆದಿದೆ.
ಲಕ್ಷ್ಮೇ ಯಾದವ (50) ಲಂಚದ ಬದಲಾಗಿ ಎಮ್ಮೆಯನ್ನೇ ತಹಸೀಲ್ದಾರನ ವಾಹನಕ್ಕೆ ಕಟ್ಟಿತೆಗೆದುಕೊಂಡು ಹೋಗುವಂತೆ ಹೇಳಿದ ವ್ಯಕ್ತಿಯಾಗಿದ್ದಾನೆ.
ಈತನ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಡಲು ತಹಸೀಲ್ದಾರ 1ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 50ಸಾವಿರವನ್ನು ರೈತ ನೀಡಿದ್ದ. ಆದಾಗ್ಯೂ ಅವನ ಜಮೀನು ವರ್ಗಾವಣೆ ಆಗಲಿಲ್ಲ, ಉಳಿದ 50 ಸಾವಿರ ಹಣ ನೀಡುವಂತೆ ಒತ್ತಾಯಿಸುತ್ತಿದ್ದ.  ಬಾಕಿ ಲಂಚದ ಹಣ ನೀಡಲಾಗದೇ ತಮ್ಮ ಎಮ್ಮೆಯನ್ನೆ ತಂದು ತಹಸೀಲ್ದಾರ್‌ರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ್ದಾನೆ.
ಇದನ್ನರಿತ ಜಿಲ್ಲಾಧಿಕಾರಿ ಸೌರವ್‌ಕುಮಾರ ಸುಮನ್‌, ಸಮಗ್ರ ವಿಚಾರಣೆಗೆ ಬಾಲದೇವಗಡದ ಉಪವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com