ಪುಲ್ವಾಮ ದಾಳಿ ಬಗ್ಗೆ ಮೋದಿ, ಕೇಂದ್ರಕ್ಕೆ ಮುಂಚೆಯೇ ತಿಳಿದಿತ್ತು: ಮಮತಾ ಬ್ಯಾನರ್ಜಿ ಗಂಭೀರ ಆರೋಪ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹುತಾತ್ಮ ಸಿಆರ್ ಪಿಎಫ್ ಯೋಧರ ವಿಷಯದ ರಾಜಕಾರಣ ಮಾಡುತ್ತಿರುವ ಆರೋಪ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪುಲ್ವಾಮ ದಾಳಿ ಬಗ್ಗೆ ಮುಂಚೆಯೇ
ಪುಲ್ವಾಮ ದಾಳಿ ಬಗ್ಗೆ ಮೋದಿ, ಕೇಂದ್ರಕ್ಕೆ ಮುಂಚೆಯೇ ತಿಳಿದಿತ್ತು: ಮಮತಾ ಬ್ಯಾನರ್ಜಿ ಗಂಭೀರ ಆರೋಪ
ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹುತಾತ್ಮ ಸಿಆರ್ ಪಿಎಫ್ ಯೋಧರ ವಿಷಯದ ರಾಜಕಾರಣ ಮಾಡುತ್ತಿರುವ ಆರೋಪ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪುಲ್ವಾಮ ದಾಳಿ ಬಗ್ಗೆ ಮುಂಚೆಯೇ ಪ್ರಧಾನಿಗೆ ತಿಳಿದಿತ್ತು ಎಂದಿದ್ದಾರೆ.
ಫೆ.14 ರಂದು ಪುಲ್ವಾಮ ದಾಳಿ ನಡೆಯುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಾಗೂ ನರೇಂದ್ರ ಮೋದಿಗೆ ಮುಂಚೆಯೇ ಮಾಹಿತಿ ಇತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ದಾಳಿ ನಡೆಯುವ ಬಗ್ಗೆ ಮಾಹಿತಿ ಇದ್ದರೂ ಸಹ ಸಿಆರ್ ಪಿಎಫ್ ಸಿಬ್ಬಂದಿಗಳನ್ನು ಏಕೆ ಏರ್ ಲಿಫ್ಟ್ ಮಾಡಲಿಲ್ಲ? ಸರಿಯಾಗಿ ಸ್ಯಾನಿಟೈಸೇಷನ್ ಮಾಡದೆಯೇ, ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸದೆಯೇ ಏಕೆ ಕನ್ವಾಯ್ ನಲ್ಲೇಕೆ ಕಳಿಸಲಾಯಿತು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಯೋಧರ ವಿಷಯವಾಗಿ ರಾಜಕಾರಣ ಮಾಡುವ ಉದ್ದೇಶದಿಂದಲೇ ಮೋದಿ, ಕೇಂದ್ರ ಸರ್ಕಾರ ಮುಂಚೆಯೇ ಉಗ್ರ ದಾಳಿ ಬಗ್ಗೆ ಮಾಹಿತಿ ಇದ್ದರೂ ಸಹ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ, ನಮ್ಮ ಯೋಧರ ರಕ್ತದ ಮೇಲೆ ಎಂದಿಗೂ ರಾಜಕೀಯ ಮಾಡಬಾರದು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಶಾಂತಿಯ ದೂತನಂತೆ ನಟಿಸುತ್ತಿರುವ ಮೋದಿ, ರಹಸ್ಯವಾಗಿ ದೇಶದಲ್ಲಿ ಯುದ್ಧದ ಪರಿಸ್ಥಿತಿ ಸೃಷ್ಟಿಸಲು, ಈ ಮೂಲಕ ದಂಗೆ ಪ್ರಾರಂಭಿಸಲು ಯತ್ನಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.