ಘಟನೆ ನಡೆದ ತಕ್ಷಣ ವ್ಯಕ್ತಿ ಟೂತ್ ಬ್ರಷ್ ನ್ನು ನುಂಗಿದ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಮರುದಿನ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಹತ್ತಿರದಲ್ಲೇ ಇದ್ದ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಅಲ್ಲಿಯೂ ಟೂತ್ ಬ್ರಷ್ ನ್ನು ನುಂಗಿದ ವಿಷಯವನ್ನು ಬಹಿರಂಗಪಡಿಸಲಿಲ್ಲ. ಪ್ರಾಥಮಿಕ ಚಿಕಿತ್ಸೆ ಕೆಲಸ ಮಾಡದೇ ಇದ್ದಾಗ ಎಕ್ಸ್ ರೇ ತೆಗೆಸಲಾಯಿತು, ಈ ವೇಳೆ ಯಾವುದೋ ವಸ್ತುವೊಂದು ಸಿಲುಕಿರುವುದು ಪತ್ತೆಯಾಗಿದೆ. ಈ ಬಳಿಕ ತೂಟ್ ಬ್ರಷ್ ನ್ನು ನುಂಗಿದ್ದನ್ನು ಅವೀದ್ ಬಹಿರಂಗಪಡಿಸಿದ್ದಾರೆ. ನಂತರ ಏಂಡೋಸ್ಕೊಪಿಗಾಗಿ ಆತನನ್ನು ಏಮ್ಸ್ ಗೆ ಕರೆದೊಯ್ಯಲಾಗಿದ್ದು ವೈದ್ಯರು ಶಸ್ತ್ರಚಿಕಿತ್ಸೆ ಇಲ್ಲದೇ ಬ್ರಷ್ ನ್ನು ಹೊರತೆಗೆಸಿದ್ದಾರೆ.