ಪರೀಕ್ಷೆ ಎದುರಿಸುವುದು ಬಿಟ್ಟು ಪಂಜಾಬ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಪ್ರಧಾನಿ ತೆರಳಿದ್ದಾರೆ: ರಾಹುಲ್ ವ್ಯಂಗ್ಯ
ಓಪನ್ ಬುಕ್ ರಫೇಲ್ ಪರೀಕ್ಷೆ ಎದುರಿಸುವುದನ್ನು ಬಿಟ್ಟು ಪಂಜಾಬ್'ನ ಲವ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆರಳಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು...
ನವದೆಹಲಿ: ಓಪನ್ ಬುಕ್ ರಫೇಲ್ ಪರೀಕ್ಷೆ ಎದುರಿಸುವುದನ್ನು ಬಿಟ್ಟು ಪಂಜಾಬ್'ನ ಲವ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆರಳಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಓಪನ್ ಬುಕ್ ಪರೀಕ್ಷೆ ಎದುರಿಸುವುದನ್ನು ಬಿಟ್ಟು ಪಂಜಾಬ್ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ತಿನಿಂದ ಪಲಾಯನ ಮಾಡಿದಂತಿದೆ ಎಂದು ಹೇಳಿದ್ದಾರೆ.
ರಫೇಲ್ ಓಪನ್ ಬುಕ ಪರೀಕ್ಷೆ ಎದುರುಸುವುದನ್ನು ಬಿಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಂಜಾಬ್ ರಾಜ್ಯದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸಂಸತ್ತಿನಿಂದ ಪಲಾಯನ ಮಾಡಿದ್ದಾರೆ. ನಾನು ಕೇಳಿದ್ದ 4 ಪ್ರಶ್ನೆಗಳಿಗೆ ಉತ್ತರಿಸುವಂತೆ ಮೋದಿಯವರಿಗೆ ಗೌರವದಿಂದ ಹೇಳಿ ಎಂದು ಅಲ್ಲಿನ ವಿದ್ಯಾರ್ಥಿಗಳಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
ಗುರುವಾರ ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ಓಪನ್ ಬುಕ್ ರಫೇಲ್ ಪರೀಕ್ಷೆ ಎದುರಿಸಲಿದ್ದಾರೆಂದು ನಿನ್ನೆ ರಾಹುಲ್ ಅವರು ಟ್ವೀಟ್ ಮಾಡಿದ್ದರು. ಅಲ್ಲದೆ, ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದರು.