ಪತ್ನಿ ಫೇಸ್'ಬುಕ್'ನಲ್ಲಿ ಅಶ್ಲೀಲ ಕಮೆಂಟ್: ಯುವಕನಿಗೆ ಐಎಎಸ್ ಅಧಿಕಾರಿ ಥಳಿತ, ವಿಡಿಯೋ ವೈರಲ್

ಪತ್ನಿಯ ಫೇಸ್ಬುಕ್ ಪ್ರೊಫೈಲ್ ನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಯುವಕನೊಬ್ಬನನ್ನು ಐಎಎಸ್ ಅಧಿಕಾರಿಯೊಬ್ಬರು ಧಳಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...
ಪತ್ನಿ ಫೇಸ್'ಬುಕ್'ನಲ್ಲಿ ಅಶ್ಲೀಲ ಕಮೆಂಟ್: ಯುವಕನಿಗೆ ಐಎಎಸ್ ಅಧಿಕಾರಿ ಥಳಿತ, ವಿಡಿಯೋ ವೈರಲ್
ಪತ್ನಿ ಫೇಸ್'ಬುಕ್'ನಲ್ಲಿ ಅಶ್ಲೀಲ ಕಮೆಂಟ್: ಯುವಕನಿಗೆ ಐಎಎಸ್ ಅಧಿಕಾರಿ ಥಳಿತ, ವಿಡಿಯೋ ವೈರಲ್
Updated on: 
ಕೋಲ್ಕತಾ: ಪತ್ನಿಯ ಫೇಸ್ಬುಕ್ ಪ್ರೊಫೈಲ್ ನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಯುವಕನೊಬ್ಬನನ್ನು ಐಎಎಸ್ ಅಧಿಕಾರಿಯೊಬ್ಬರು ಧಳಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
2011ರ ಪಶ್ಚಿಮ ಬಂಗಾಳದ ಕೆೇಡರ್'ನ ಐಎಎಸ್ ಅಧಿಕಾರಿ ನಿಖೀಲ್ ನಿರ್ಮಲ್ ಅವರು ಯುವಕನನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ಥಳಿಸಿದ್ದಾರೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. 
ಐಎಎಸ್ ಅಧಿಕಾರಿಯೊಂದಿಗೆ ಅವರ ಪತ್ನಿ ಕೂಡ ಯುವಕನಿಗೆ ಥಳಿಸಿದ್ದಾರೆ. ಥಳಿಸುವ ವೇಳೆ ನಿರ್ಮಲ್ ಅವರು, ನನ್ನ ಜಿಲ್ಲೆಯಲ್ಲಿ ನನ್ನ ವಿರುದ್ಧ ಏನು ಮಾಡಲೂ ಬಿಡುವುದಿಲ್ಲ. ನಿಮ್ಮ ಮನೆಗೆ ಬಂದು, ನನ್ನು ಕೊಲ್ಲುತ್ತೇನೆಂದು ಹೇಳಿದ್ದಾರೆ. 
ಇದೇ ವೇಳೆ ಮಾತನಾಡಿರುವ ನಿರ್ಮಲ್ ಅವರ ಪತ್ನಿ, ನಿನ್ನ ಕೆಟ್ಟ ಹೇಳಿಕೆಯ ವಿರುದ್ಧ ಯಾರಿದ್ದಾರೆ ಹೇಳು? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಯುವಕ ಕಾಲು ಹಿಡಿದು ಕ್ಷಮಿಸುವಂತೆ ಕೇಳಿದರೂ ಕ್ಷಮಿಸದ ಅಧಿಕಾರಿ, ಮತ್ತೆ ಥಳಿಸುವುದನ್ನು ಮುಂದುವರೆಸಿದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಯಾಗಲೀ ಆಥವಾ ಅವರ ಪತ್ನಿಯಾಗಲೀ ಯಾವುದೇ ದೂರುಗಳನ್ನು ದಾಖಲಿಸಿಲ್ಲ. ದೂರು ದಾಖಲಿಸದೆಯೇ ಯುವಕನನ್ನು ಠಾಣೆಗೆ ಕರೆಸಿ ಥಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 
ಪ್ರಕರಣ ಸಂಬಂಧ ನಿರ್ಮಲ್ ಸಿಂಗ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com