ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಪ್ರತಾಪ್ ರುಡಿ ಅವರು, ಸಿನ್ಹಾ ಒಬ್ಬ ಅವಕಾಶವಾದಿ ರಾಜಕಾರಣಿ. ನಮ್ಮ ಪಕ್ಷದ ಸಂಸದರಾಗಿ ಅಧಿಕಾರ ಅನುಭವಿಸುತ್ತ, ವಿವಿಧ ವೇದಿಕೆಗಳಲ್ಲಿ ಪಕ್ಷದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದರು.