ಆಂಧ್ರದಲ್ಲಿ ರಾಜಕೀಯ ಬೆಳವಣಿಗೆ: ಜಗನ್ ರೆಡ್ಡಿ ಭೇಟಿ ಮಾಡಿದ ಎನ್ ಟಿಆರ್ ಅಳಿಯ, ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

2019 ರ ಲೋಕಸಭಾ ಚುನಾವಣೆಗಾಗಿ ಮೋದಿ ವಿರುದ್ಧ ಇತ್ತ ಮಹಾಘಟಬಂಧನ್ ರಚನೆಯಾಗುತ್ತಿದ್ದಂತೆಯೇ ಆಂಧ್ರಪ್ರದೇಶದ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಜಗನ್ ರೆಡ್ಡಿ
ಜಗನ್ ರೆಡ್ಡಿ
Updated on
2019 ರ ಲೋಕಸಭಾ ಚುನಾವಣೆಗಾಗಿ ಮೋದಿ ವಿರುದ್ಧ ಇತ್ತ ಮಹಾಘಟಬಂಧನ್ ರಚನೆಯಾಗುತ್ತಿದ್ದಂತೆಯೇ ಆಂಧ್ರಪ್ರದೇಶದ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 
ಆಂಧ್ರದ ಮಾಜಿ ಸಿಎಂ ಎನ್ ಟಿಆರ್ ಅವರ ಹಿರಿಯ ಅಳಿಯ ದಗ್ಗುಬಾಟಿ ವೆಂಕಟೇಶ್ವರ ರಾವ್ ಜ.27 ರಂದು ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. 
ಹೈದರಾಬಾದ್ ನ ಲೋಟಸ್ ಪಾಂಡ್ ನಲ್ಲಿ ಈ ಭೇಟಿ ನಡೆದಿದ್ದು, ವೆಂಕಟೇಶ್ವರ ರಾವ್  ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿರುವ ಎನ್ ಟಿ ಆರ್ ಪುತ್ರಿ ಡಿ ಪುರಂದರೇಶ್ವರಿ ಅವರ ಪತಿ ವೆಂಕಟೇಶ್ವರ್ ರಾವ್ ತಮ್ಮ ಪುತ್ರ ಹಿತೇಶ್ ಚೆಂಚುರಾಮ್ ಅವರೊಂದಿಗೆ ತೆರಳಿ ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಗೊಳ್ಳುವುದಕ್ಕೆ ತಯಾರಿ ನಡೆಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಭೇಟಿ ಬಳಿಕ ಮಾತನಾಡಿರುವ ವೆಂಕಟೇಶ್ವರ ರಾವ್ ಅವರು ತಮ್ಮ ಮುಂದಿನ ನಡೆ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com