2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ, ಶೇ.75ರಷ್ಟು ಬಡವರಿಗೆ ಕನಿಷ್ಠ ಆದಾಯ ಖಾತ್ರಿ ನೀಡಬೇಕು. ಆದರೆ ಮೋದಿ ಸರ್ಕಾರ ಈ ಯೋಜನೆಗೆ ಹಣ ಹೇಗೆ ಹೊಂದಿಸುತ್ತದೆ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಆಹಾರ ಸಬ್ಸಿಡಿಗಾಗಿ 1 ಲಕ್ಷ 70 ಸಾವಿರ ಕೋಟಿ, ಎಂಎನ್ ಆರ್ ಇಜಿಗೆ 55 ಸಾವಿರ ಕೋಟಿ ರುಪಾಯಿ ನೀಡಲಾಗುತ್ತಿದ್ದು, ಹಣಕಾಸಿನ ಸಮತೋಲನ ಸಾಧಿಸಲು ಸಾಧ್ಯವೆ? ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ.