ಗೆಳೆಯನ ಜೊತೆ ಮಾತಾಡುತ್ತಿದ್ದ ಮಗಳ ಮೇಲೆ ಕೋಪಗೊಂಡು ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ತಂದೆ!

ಪದೇ ಪದೇ ಎಚ್ಚರಿಕೆಯ ನಂತರವೂ ಗೆಳೆಯನ ಜೊತೆ ಮಾತನಾಡುವುದನ್ನು ಮುಂದುವರೆಸಿದ್ದ ಮಗಳ ಮೇಲೆ ಕೋಪಗೊಂಡ ತಂದೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಗೆಳೆಯನ ಜೊತೆ ಮಾತಾಡುತ್ತಿದ್ದ ಮಗಳ ಮೇಲೆ ಕೋಪಗೊಂಡು ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ತಂದೆ!
ಗೆಳೆಯನ ಜೊತೆ ಮಾತಾಡುತ್ತಿದ್ದ ಮಗಳ ಮೇಲೆ ಕೋಪಗೊಂಡು ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ತಂದೆ!
Updated on: 
ಹೈದರಾಬಾದ್: ಪದೇ ಪದೇ ಎಚ್ಚರಿಕೆಯ ನಂತರವೂ ಗೆಳೆಯನ ಜೊತೆ ಮಾತನಾಡುವುದನ್ನು ಮುಂದುವರೆಸಿದ್ದ ಮಗಳ ಮೇಲೆ ಕೋಪಗೊಂಡ ತಂದೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ಘಟನೆ  ಹೈದರಾಬಾದ್ ನಲ್ಲಿ ನಡೆದಿದೆ. 
ನಸುಕಿನ ವೇಳೆ ಮಗಳು ತನ್ನ ಗೆಳೆಯನ ಜೊತೆ ಮಾತನಾಡುತ್ತಿದ್ದುದ್ದನ್ನು ಕಂಡ ತಂದೆ, " ನೀನು ನಿನ್ನ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ಅದನ್ನು ನಾನೇ ಪೂರೈಸುವೆ" ಎಂದು ಮಗಳ ಉಡುಪನ್ನು ತೆಗೆಯಲು ಯತ್ನಿಸಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ.
16 ವರ್ಷದ ಯುವತಿ ಒಬ್ಬಾತನನ್ನು ಪ್ರೇಮಿಸುತ್ತಿದ್ದಳು ಈ ವಿಷಯ ಪೋಷಕರಿಗೂ ತಿಳಿದಿತ್ತು. ಈ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡಿದ್ದರೂ ಜೂ.01 ರಂದು ಬೆಳಿಗ್ಗೆ 4 ಗಂಟೆಗೆ ಆಕೆ ತನ್ನ ಗೆಳೆಯನ ಜೊತೆ ಮಾತನಾಡುತ್ತಿದ್ದನ್ನು ಯುವತಿಯ ತಂದೆ ಗಮನಿಸಿದ್ದಾನೆ. 
ಯುವತಿಯ ಪೋಷಕರು ಬಿಹಾರ ಮೂಲದ ಕಾರ್ಮಿಕರಾಗಿದ್ದು, ಚಿಲುಕ ನಗರದಲ್ಲಿ ವಾಸವಿದ್ದರು. ತಂದೆಯೇ ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ ಯುವತಿ ಕಿರುಚಿದ್ದು ಆಕೆಯ ತಾಯಿ ಎಚ್ಚರಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಯುವತಿಯ ತಂದೆಯ ವಿರುದ್ಧ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com